ಉಜಿರೆ: ಸಂಹಿಕ ಭಾಷಾ ವೇದಿಕೆ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
ಉಜಿರೆ: ವಿಚಾರಪ್ರದ ವಿಷಯಗಳನ್ನು ಮಂಡಿಸಲು ಹಾಗೆ ತಿಳಿದುಕೊಳ್ಳಲು ಸಂಹಿಕ ಎನ್ನುವ ಈ ಭಾಷಾವೇದಿಕೆ ವಿದ್ಯಾರ್ಥಿಗಳಿಗೆ ಒಳ್ಳೆಯ ವೇದಿಕೆಯಾಗಲಿ ಎಂದು ಉಜಿರೆಯ ಎಸ್. ಡಿ.ಎಮ್ ಪ.ಪೂ ಕಾಲೇಜಿನ ಪ್ರಾಚಾರ್ಯ ಪ್ರೊ.ದಿನೇಶ್ ಚೌಟ ಹೇಳಿದರು.
ಇವರು ಎಸ್.ಡಿ.ಎಮ್ ಪ.ಪೂ ಕಾಲೇಜಿನ ಸಂಸ್ಕೃತ, ಹಿಂದಿ ಹಾಗೂ ಕನ್ನಡ ಭಾಷಾ ವಿಭಾಗದವರು ರಚಿಸಿದ ‘ಸಂಹಿಕ’ ಭಾಷಾ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ ಶಶಿಧರ ಶೆಟ್ಟಿಯವರು ಅಭ್ಯಾಗತರಾಗಿ ಆಗಮಿಸಿ, ಪ್ರತಿಯೊಬ್ಬರಲ್ಲೂ ಪೌರಪ್ರಜ್ಞೆ ಅಗತ್ಯವಾಗಿ ಬೇಕಾಗಿದೆ. ,ಮನುಷ್ಯ ಸಮಾಜಮುಖಿಯಾಗಿರಬೇಕೆಂದು ಕರೆನೀಡಿದರು. ನಿರ್ವಹಣಾ ವಿಭಾಗದ ಅಧಿಕಾರಿ ಕೃಷ್ಣ ಭಟ್ ಉಪಸ್ಥಿತರಿದ್ದರು.
ಕನ್ನಡ ಭಾಷಾ ವಿಭಾಗದ ಮುಖ್ಯಸ್ಥ ಡಾ. ರಾಜೇಶ್. ಬಿ. ಹಾಗೂ ಉಪನ್ಯಾಸಕ ಮಹಾವೀರ ಜೈನ್  ಅಭ್ಯಾಗತರನ್ನು ಗೌರವಿಸಿದರು. ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ್ ಐತಾಳ್ ಸ್ವಾಗತಿಸಿದರು. ಕನ್ನಡ ಭಾಷಾ ಉಪನ್ಯಾಸಕ ಸುಭಾಸ್ ರಾವ್ ಬೋಳೂರ್ ನಿರೂಪಿಸಿ, ಹಿಂದಿ ಭಾಷಾ ವಿಭಾಗದ ಮುಖ್ಯಸ್ಥ ನಾಗರಾಜ್ ಭಂಡಾರಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.