ಶಿಬಾಜೆ: ಬಂಡಿಹೊಳೆ ನಿವಾಸಿ ಸುಬ್ರಾಯ ಫಡ್ಕೆ ನಿಧನ

ಶಿಬಾಜೆ: ಶಿಬಾಜೆ ಗ್ರಾಮದ ಅರಸಿನಮಕ್ಕಿ ಸಮೀಪದ ಬಂಡಿಹೊಳೆ ನಿವಾಸಿ ಸುಬ್ರಾಯ ಫಡ್ಕೆ (72.ವ) ರವರು ಅಲ್ಪಕಾಲದ ಅಸೌಖ್ಯದಿಂದ ನ.9 ರಂದು ಸ್ವಗೃಹದಲ್ಲಿ ನಿಧನರಾದರು.
ಇವರು ಮೂಲತಃ ಮುಂಡಾಜೆ ಮೋರಿ ಮನೆಯವರಾಗಿದ್ದು, ಕೆಲಕಾಲ ಕಾರ್ಕಳ ಜೈ ಹಿಂದ್ ಚಿತ್ರಮಂದಿರದ ಸಿಬ್ಬಂದಿಯಾಗಿ, ಬಳಿಕ ಮುಂಡಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಪತ್ರಕರ್ತ ಮೋದಿ ಮುಂಡಾಜೆ ಅವರ ಸಹೋದರಾಗಿದ್ದ ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.