ಉಜಿರೆಯಲ್ಲಿ ಎಸ್ಸೆಸ್ಸೆಫ್ ಯುನಿಟ್ ಕಾನ್ಫರೆನ್ಸ್

ಉಜಿರೆ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಉಜಿರೆ, ಕಕ್ಕೆಜಾಲು ಹಾಗೂ ಅತ್ತಾಜೆ ಶಾಖೆಗಳ ಜಂಟಿ ಆಶ್ರಯದಲ್ಲಿ ಡಿ.10 ರಂದು ‘ಯುನಿಟ್ ಕಾನ್ಫರೆನ್ಸ್’ ಹಳೆಪೇಟೆ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.
ಕಾಸರಗೋಡು ಜಾಮಿಅ ಸಅದಿಯಾ ಅರೇಬಿಯಾ ವಿದ್ಯಾ ಸಂಸ್ಥೆಯ ಪ್ರೊಫೆಸರ್ ಕೆ.ಪಿ ಹುಸೈನ್ ಸಅದಿ ಕೆಸಿ ರೋಡ್ ಮಾತನಾಡಿ, ‘ಪವಿತ್ರ ಅಹ್ಲುಸ್ಸುನ್ನತ್ ವಲ್-ಜಮಾಅತಿನ ಆಶಯಾದರ್ಶಗಳನ್ನು ಕಾಪಾಡುವ ಜವಾಬ್ದಾರಿ ಇಂದಿನ ಯುವ ಜನತೆಗಿದೆ. ಈ ನಿಟ್ಟಿನಲ್ಲಿ ಎಸ್ಸೆಸ್ಸೆಫ್ ಸಂಘಟನೆ ಮೂಲಕ ಹಾಗೂ ವಿದ್ವಾಂಸರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕಾಗಿದೆ’ ಎಂದರು.
ಬೆಳ್ತಂಗಡಿ ಸಂಯುಕ್ತ ಜಮಾಅತ್ ಅಧ್ಯಕ್ಷ ಅಸ್ಸಯ್ಯದ್  ಇಸ್ಮಾಯಿಲ್ ಅಲ್‌ಹಾದೀ ತಂಙಳ್ ದುಆ ನೆರವೇರಿಸಿದರು. ಉಜಿರೆ ಸೆಕ್ಟರ್ ಅಧ್ಯಕ್ಷ ಅಶ್ರಫ್ ಕೆಸಿಎಫ್ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಮುದರ್ರಿಸ್ ಅಬ್ಬಾಸ್ ಮದನಿ ಉದ್ಘಾಟನೆಗೈದರು. ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಶನ್ ಅಧ್ಯಕ್ಷ ಕಾಸಿಂ ಮುಸ್ಲಿಯಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಎಸ್‌ವೈಎಸ್ ಬೆಳ್ತಂಗಡಿ ಝೋನ್ ಅಧ್ಯಕ್ಷ ಎಸ್‌ಎಂ ಕೋಯ ತಂಙಳ್, ಎಸ್‌ವೈಎಸ್ ಉಜಿರೆ ಝೋನ್ ಅಧ್ಯಕ್ಷ ಉಮರ್‌ಕುಂಞ ನಾಡ್ಜೆ, ಹಳೆಪೇಟೆ ಜುಮಾ ಮಸೀದಿ ಸ್ವಲಾತ್ ಕಮಿಟಿ ಅಧ್ಯಕ್ಷ ಹಮೀದ್ ಹಾಜಿ, ಎಸ್‌ಜೆಎಂ ಉಜಿರೆ ಕೋಶಾಧಿಕಾರಿ ಖಾಲಿದ್ ಮುಸ್ಲಿಯಾರ್, ಕೆಸಿಎಫ್ ಸಾಂತ್ವನ ವಿಭಾಗದ ಚೆಯರ್‌ಮಾನ್ ಸಲೀಂ, ಸ್ಥಳೀಯ ಮದರಸ ಮುಅಲ್ಲಿಂ ರಶೀದ್ ಮದನಿ, ಅತ್ತಾಜೆ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಆಸಿಫ್, ಕಕ್ಕೆಜಾಲು ಜುಮಾ ಮಸೀದಿ ಅಧ್ಯಕ್ಷ ಲತೀಫ್, ಎಸ್ಸೆಸ್ಸೆಫ್ ಉಜಿರೆ ಶಾಖಾಧ್ಯಕ್ಷ ಆಸಿಫ್ ಎಸ್‌ಎ ಹಾಗೂ ಮತ್ತಿತರು ಉಪಸ್ಥಿತರಿದ್ದರು.
ಖಲಂದರ್ ಸಅದಿ ಸ್ವಾಗತಿಸಿ ವಂದಿಸಿದರು, ಮುಹಮ್ಮದ್ ಶಫೀಕ್ ನಿರೂಪಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.