ಬೆಳಾಲು: ದೀಪಾವಳಿ ಪ್ರಯುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ

ಬೆಳಾಲು: ದೀಪಾವಳಿ ಹಬ್ಬದ ಪ್ರಯುಕ್ತ ಬೆಳಾಲಿನಲ್ಲಿ ಮ್ಯಾಟ್ ಕಬಡ್ಡಿ ಪಂದ್ಯಾಟವು ನ.11 ರಂದು 6 ತಂಡಗಳೊಂದಿಗೆ ನಡೆಯಿತು.
ಪಂದ್ಯಾಟವನ್ನು ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಪಿ ತಿಮ್ಮಪ್ಪ ಗೌಡ ಬನಂದೂರು ದೀಪ ಬೆಳಗಿಸಿ ಹಾಗೂ ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬೆಳಾಲು ಗ್ರಾ.ಪಂ ಅಧ್ಯಕ್ಷ ದಿನೇಶ್ ಕೋಟ್ಯಾನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳಾಲು ಸೇವಾ ಸಹಾಕಾರಿ ಸಂಘದ ನಿರ್ದೇಶಕ ಸುಲೈಮಾನ್, ಬೆಳ್ತಂಗಡಿ ಸುದ್ದಿಬಿಡುಗಡೆ ವಾರ ಪತ್ರಿಕೆಯ ಸಹಾಯಕ ವ್ಯವಸ್ಥಾಪಕ ಪಿ. ಜಾರಪ್ಪ ಪೂಜಾರಿ ಬೆಳಾಲು, ಬೆಳಾಲು ಗ್ರಾ.ಪಂ ಸದಸ್ಯ ಪ್ರವೀಣ್ ವಿಜಯ್, ಸ್ಥಳೀಯ ಶ್ರೀ.ಧ.ಮಂ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಜಿಲ್ಲಾ ಕಬಡ್ಡಿ ತೀರ್ಪುಗಾರ ಮಂಡಳಿ ಅಧ್ಯಕ್ಷ ಕೃಷ್ಣಾಂನದ ರಾವ್, 6 ತಂಡಗಳ ವ್ಯವಸ್ಥಾಪಕರುಗಳಾದ ಗ್ರಾ.ಪಂ ಅಭಿವೃಧ್ಧಿ ಅಧಿಕಾರಿ ಮೋಹನ ಬಂಗೇರ, ಗ್ರಾ.ಪಂ ಮಾಜಿ ಅಧ್ಯಕ್ಷ ಮೋಹನ ಗೌಡ, ಶಿಲ್ಪಿ ಶಶಿಧರ ಆಚಾರ್ಯ, ಒಣ್ಯಾಲಿನ ಚಿಂಟು ಯಾನೆ ವಿಶೇಷ್ ಗೌಡ, ಸುರೇಂದ್ರ ಗೌಡ ಎಚ್, ರಮೇಶ್,ಶಶಿಧರ್ ಒಡಿಪ್ರೊಟ್ಟು ಹಾಗೂ ಕ್ರೀಡಾ ಪಟುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.