HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಕೊಕ್ಕಡ: ಕಾರು ಮತ್ತು ಬಸ್ಸು ನಡುವೆ ಅಪಘಾತ; ಐವರಿಗೆ ಗಾಯ

ಕೊಕ್ಕಡ: ಶಿಶಿಲದಿಂದ ಕೊಕ್ಕಡಕ್ಕೆ ಬರುತ್ತಿದ್ದ ಕಾರು ಮತ್ತು ಸುಬ್ರಹ್ಮಣ್ಯ ಕಡೆಯಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಸರಕಾರಿ ಬಸ್ ನಡುವೆ ಪರಸ್ಪರ ಅಪಘಾತ ಸಂಭವಿಸಿ, ಐವರು ಗಾಯಗೊಂಡ ಘಟನೆ ನ.11 ರಂದು ನಡೆದಿದೆ.
ಸೌತಡ್ಕದಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಶಿಶಿಲದ ದೇನೋಡಿಯಿಂದ ತೆರಳುತ್ತಿದ್ದ ಕಾರು ಮತ್ತು ಧರ್ಮಸ್ಥಳಕ್ಕೆ ತೆರಳುತ್ತಿದ್ದ ಬಸ್ ಕೊಕ್ಕಡ ಕಾಪಿನಬಾಗಿಲು ಬಳಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಸಂತೋಷ್ ಹಾಗೂ ಲಿಖಿತ್ ರವರಿಗೆ ಗಂಭೀರ ಗಾಯಗಳಾಗಿವೆ. ಅಖಿಲ್, ವಿಜಯ, ಮತ್ತು ಕೇಶವ ಇವರಿಗೆ ಅಲ್ಪಸ್ವಲ್ಪ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.