ಶಿರಾಡಿ ಬಳಿ ಪ್ರಪಾತಕ್ಕೆ ಉರುಳಿದ ಕಾರು: ಚಾಲಕ ಸ್ಥಳದಲ್ಲೇ ಮೃತ್ಯು

ಶಿರಾಡಿ ಗಡಿಯ ಸಮೀದ ಬರ್ಚಿನಹಳ್ಳಿ ಸೇತುವೆ ಬಳಿ ನ.10 ರಂದು ತಡರಾತ್ರಿ ಕಾರೊಂದು ತಡೆಗೊಡೆಗೆ ಡಿಕ್ಕಿಹೊಡೆದು ಪ್ರಪಾತಕ್ಕೆ ಉರುಳಿದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಂಗಳೂರು ಹೊಸೂರು ತಾಲೂಕಿನ, ತಮಿಳುನಾಡು ಮೂಲದ ವೆಂಕಟರಾಜು (೪೦.ವ) ಮೃತಪಟ್ಟ ವ್ಯಕ್ತಿ. ಇವರು ನ.10 ರಂದು ರಾತ್ರಿ ಕುಕ್ಕೆಯಲ್ಲಿ ಪೂಜೆ ಮುಗಿಸಿ ಹೊಸೂರಿಗೆ ವಾಪಾಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.