ಬೆಳ್ತಂಗಡಿ: ‘ನ್ಯೂ ಸೈಮನ್ ಇಂಡಸ್ಟ್ರೀಸ್’ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿಯ ಸಂತೆಕಟ್ಟೆ ಬಳಿ ಇರುವ ಸೈಮನ್ ಇಂಡಸ್ಟ್ರೀಸ್ ಇದರ ನೂತನ ಸಹ ಸಂಸ್ಥೆ ನ್ಯೂ ಸೈಮನ್ ಇಂಡಸ್ಟ್ರೀಸ್ ಇದರ ಉದ್ಘಾಟನಾ ಸಮಾರಂಭವು ಇಂದು( ನ.10) ಜರುಗಿತು.
ನೂತನ ಸಂಸ್ಥೆಯ ಉದ್ಘಾಟನೆಯನ್ನು ಸಂತೆಕಟ್ಟೆ ಸುವರ್ಣ ಆರ್ಕೇಡ್ ಮಾಲಕ ನಾಣ್ಯಪ್ಪ ಪೂಜಾರಿ ನೆರವೇರಿಸಿ, ಶುಭ ಹಾರೈಸಿದರು. ಹೋಲಿ ರೆಡೀಮರ್ ಚರ್ಚ್ ಗುರುಗಳಾದ ವಂ. ಫಾ| ಬೊನವೆಂಚರ್ ನಜ್ರೆತ್ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಉಜಿರೆ ರುಡ್‌ಸೆಟ್ ಸಂಸ್ಥೆಯ ಅಬ್ರಹಾಂ ಜೇಮ್ಸ್, ಬೆಳ್ತಂಗಡಿ ವಕೀಲರಾದ ಸತೀಶ್ ರೈ ಬಾರದಡ್ಕ, ಸಿಸ್ಟರ್ ಲೂಸಿಯಾನ ಮಂಗಳೂರು ಉಪಸ್ಥಿತರಿದ್ದರು.
ಬಂದ ಅತಿಥಿಗಳನ್ನು ಸಂಸ್ಥೆಯ ಮಾಲಕರಾದ ಫೆಡ್ರಿಕ್ ಪಿಂಟೋ, ಡೆನ್ವಿಲ್ ಸೈಮನ್ ಪಿಂಟೊ ಸ್ವಾಗತಿಸಿ, ಸತ್ಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.