ಜನಸೇವಾ ಟ್ರಸ್ಟ್ ನಾರಾವಿ ಇದರ ಉದ್ಘಾಟನಾ ಸಮಾರಂಭ

ನಾರಾವಿ: ಜನಸೇವಾ ಟ್ರಸ್ಟ್ ನಾರಾವಿ ಇದರ ಉದ್ಘಾಟನಾ ಸಮಾರಂಭವು  ನ.9 ರಂದು ನಾರಾವಿ ಪಾರಿಜಾತ ಕಾಂಪ್ಲೆಕ್ಸ್ ನಲ್ಲಿ ಜರುಗಿತು. ಶಾಸಕ  ಹರೀಶ್ ಪೂಂಜಾ  ಟ್ರಸ್ಟ್ ನ ಕಛೇರಿಯನ್ನು ಉದ್ಘಾಟಿಸಿ ಸಂಸ್ಥೆಗೆ ಶುಭಹಾರೈಸಿದರು.
ವೇದಿಕೆಯಲ್ಲಿ ಹ್ಯೂಮನಿಟಿ ಟ್ರಸ್ಟ್ ಬೆಳ್ಮಣ್ ಇದರ ಸ್ಥಾಪಕ ರೋಶನ್ ಬೆಳ್ಮಣ್, ಉಡುಪಿಯ ನ್ಯಾಯವಾದಿಗಳಾದ ಗಿರೀಶ್ ಎಸ್.ಪಿ ಏಳಿಂಜೆ, ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕರಾದ ಕೃಷ್ಣತಂತ್ರಿ, ನಿವೃತ್ತ ಶಿಕ್ಷಕ ಬಾಬು ಶೆಟ್ಟಿ ನಾರಾವಿ, ಗ್ರಾ.ಪಂ ಅಧ್ಯಕ್ಷ ರವೀಂದ್ರ ಪೂಜಾರಿ ಬಾಂದೊಟ್ಟು, ಮಾಜಿ ತಾ.ಪಂ ಸದಸ್ಯ  ಜಯಂತ್ ಕೋಟ್ಯಾನ್, ಡಾ| ಪ್ರಸಾದ್ ಬಿ.ಶೆಟ್ಟಿ, ಗ್ರಾ.ಪಂ ಸದಸ್ಯ ಉದಯ್ ಹೆಗ್ಡೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ  ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿರುವ ಶುಭಾಷಿಣಿ ಇವರಿಗೆ 10,000 ರೂ ಧನಸಹಾಯ ವಿತರಿಸಲಾಯಿತು ಹಾಗೂ ಮರದಿಂದ ಬಿದ್ದು ದುಡಿಯಲಾಗದ ಸ್ಥಿತಿಯಲ್ಲಿ ಇರುವ ಕೃಷ್ಣಾನಂದ ಶೆಟ್ಟಿ ಹಾಗೂ ವಸಂತ ಇವರ ಕುಟುಂಬಕ್ಕೆ ತಲಾ ಒಂದು ಕ್ವಿಂಟಾಲ್ ಅಕ್ಕಿಯನ್ನು ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.