ಬೆಳ್ತಂಗಡಿ ಸರಕಾರಿ ಸಾರ್ವಜನಿಕ ಅಸ್ಪತ್ರೆಯಲ್ಲಿ ಹೆಚ್ಚುವರಿ ಡಯಾಲಿಸಿಸ್ ಯಂತ್ರ ಮತ್ತು ಕೊಠಡಿ ಉದ್ಘಾಟನೆ

 

 

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಡಯಾಲಿಸಿಸ್‌ಗೊಳಗಾಗುತ್ತಿರುವ ರೋಗಿಗಳಿಗೆ ಇನ್ನೂ ಹೆಚ್ಚಿನ ಪ್ರಯೋಜ ದೊರೆಯುವಂತಾಗಲು ಪ್ರತೀ 15 ದಿನಗಳಿಗೊಮ್ಮೆ ನೆಫ್ರೋಜಿಲಿಸ್ಟ್ ನೇಮಕಕ್ಕೆ ಈಗಾಗಲೇ ಖಾಸಗಿ ಸಂಸ್ಥಯೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಮುಂದಕ್ಕೆ ಹೆಚ್ಚುವರಿ ಆಪರೇಟರ್ ನಿಯೋಜನೆಯೊಂದಿಗೆ ಸಂಜೆ 7 ಗಂಟೆಯಿಂದ 12 ಗಂಟೆಯವರೆಗೆ, ಪೂರ್ವಾಹ್ನ 4 ರಿಂದ ಬೆಳಿಗ್ಗೆ 7 ಗಂಟೆಯವರೆಗೆ ರಾತ್ರಿ ಪಾಳಿ ಪ್ರಾರಂಭಿಸಲು ಇಲಾಖೆಯಿಂದ ಒಪ್ಪಿಗೆ ಆಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಡಯಾಲಿಸಿಸ್ ಕೇಂದ್ರಕ್ಕೆ ಸೌತ್‌ಕೆನರಾ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಕತಾರ್ ಅವರು ದೇಣಿಗೆಯಾಗಿ ನೀಡಿದ ಯಂತ್ರ ತಿಂಗಳಿನಿಂದ ಹಾಗೆಯೇ ಇತ್ತು. ಇದೀಗ ಹೊಸ ಕೊಠಡಿಯಲ್ಲಿ ಯಂತ್ರಗಳಿಗೆ ಚಾಲನೆ ನೀಡಲಾಗುತ್ತಿದೆ. ಇನ್ನೂ ಎರಡು ಯಂತ್ರಗಳ ಆವಶ್ಯಕತೆ ಇದ್ದು ಅದನ್ನು ಒದಗಿಸಲು ದಾನಿಗಳು ಮುಂದೆಬರಬೇಕು ಎಂದು ಶಾಸಕರು ಈ ಸಂದರ್ಭ ಭಿನ್ನವಿಸಿಕೊಂಡರು.
ಬೆಳ್ತಂಗಡಿ ತಾಲೂಕಿನ ಕಿಡ್ನಿ ವೈಫಲ್ಯಕ್ಕೊಳಗಾಗಿರುವ ರೋಗಿಗಳ ಅನುಕೂಲಕ್ಕಾಗಿ ಇಲ್ಲಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾನಿಗಳು, ಸಂಘ ಸಂಸ್ಥೆಗಳ ನೆರವಿನಿಂದ ಪ್ರಾರಂಭಿಸಲಾಗಿರುವ ಡಯಾಲಿಸಿಸ್ ಯಂತ್ರಗಳ ಉದ್ಘಾಟನೆ ಮತ್ತು ವಿಸ್ತೃತ ಡಯಾಲಿಸಿಸ್ ಘಟಕದ ಉದ್ಘಾಟನೆಯನ್ನು ನ. 7 ರಂದು ನೆರವೇರಿಸಿ ಅವರು ಮಾತನಾಡಿದರು.
ಈ ಸಂದರ್ಭ ಪಟ್ಟಣ ಪಂಚಾಯತ್ ನೂತನ ಸದಸ್ಯ ಶರತ್, ಈ ಹಿಂದೆ ಡಯಾಲಿಸಿಸ್ ಯಂತ್ರ ಒದಗಿಸಿಕೊಡುವಲ್ಲಿ ಶ್ರಮಿಸಿದ ದ. ಕ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಕತಾರ್ ಇದರ ಸದಸ್ಯ ಮುಹಮ್ಮದ್‌ಕುಂಞಿ ಕತಾರ್, ಸಾಮಾಜಿಕ ಮುಂದಾಳುಗಳಾದ ಬಾಲಕೃಷ್ಣ ಶೆಟ್ಟಿ ಸವಣಾಲು, ಸದಾನಂದ ಪೂಜಾರಿ ಉಂಗಿಲಬೈಲು, ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರಾದ ಜಯಶ್ರೀ ಪ್ರಕಾಶ್ ಅಪ್ರಮೇಯ, ಜೇಸಿ ತುಕರಾಮ ಬಿ ಮತ್ತು ಸಂತೋಷ್ ಶೆಟ್ಟಿ ಲಾಯಿಲ, ತಾ. ಆರೋಗ್ಯಾಧಿಕಾರಿ ಡಾ. ಕಲಾಮಧು ಶೆಟ್ಟಿ, ಅಸ್ಪತ್ರೆಯ ಪ್ರಭಾರ ಆಡಳಿತ ವೈದ್ಯಾಧಿಕಾರಿ ಡಾ. ಶಶಿಕಾಂತ್ ಡೋಂಗ್ರೆ, ಅರಿವಳಿಕೆ ತಜ್ಞ ಡಾ. ಶಶಾಂಕ ಕಾಂಬ್ಳೆ, ದಂತ ವೈದ್ಯೆ ಡಾ. ಅಝ್ಮಿಯಾ ಮೈಂದಲ, ಜನರಲ್ ಸರ್ಜನ್ ಡಾ. ಯೋಗೇಶ್, ಫಾರ್ಮಸಿಸ್ಟ್ ಚಂದ್ರಶೇಖರ್, ಸಹಾಯಕ ಆಡಳಿತಾಧಿಕಾರಿ ಶ್ರೀಕಾಂತ್ ಹೆಗ್ಡೆ, ಸುಶ್ರೂಷಕ ಅಧೀಕ್ಷಕಿ ಸುಭಾಷಿಣಿ, ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ನಡೆಸುತ್ತಿರುವ ಸಂಸ್ಥೆ ಇಎಸ್‌ಜೆಎಜಿ ಸಂಜೀವಿನಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇದರ ಆಡಳಿತಾಧಿಕಾರಿ ಬಸುದೇವ ದಾಸ್, ಸಂಯೋಜಕ ಕೃಷ್ಣಾನು, ತಾಂತ್ರಿಕ ಮೇಲ್ವಿಚಾರಕಿ ಲೀಡಾಪ್ರಸಾದ್, ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.