ಲಯನ್ಸ್ ಮೈಸೂರು ರೀಜನ್ ವಲಯಾಧ್ಯಕ್ಷರಾಗಿ ಗೇರುಕಟ್ಟೆ ಹೇಮಂತ್ ಕುಮಾರ್ ನೇಮಕ

ಬೆಳ್ತಂಗಡಿ: ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಮೈಸೂರು ರೀಜನ್‌ನ ವಲಯ ಅಧ್ಯಕ್ಷರಾಗಿ ಗೇರುಕಟ್ಟೆಯ ಹೇಮಂತ್‌ಕುಮಾರ್ ನೇಮಕಗೊಂಡಿದ್ದಾರೆ. ಲ| ಹೇಮಂತ್ ಅವರು ಕುಮಾರ್ ಲಯನ್ಸ್ ಕ್ಲಬ್ ಮೈಸೂರು ಇಲ್ಯೆಟ್ ಇದರ ಕಾರ್ಯದರ್ಶಿಯಾಗಿ, ಕಳೆದ ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಗ್ರಾಮೀಣ ಪ್ರದೇಶದಲ್ಲಿ ಹಲವಾರು ಸೇವಾಕಾರ್ಯಕ್ರಮಗಳನ್ನು ಮಾಡಿದ್ದರು.

ಉಚಿತ ಆರೋಗ್ಯ ತಪಾಸಣಾ ಶಿಬಿರ, ಸರ್ಕಾರಿ ಶಾಲೆಗೆ ಬೆಂಚು,ಡೆಸ್ಕ್‌ಗಳ ವಿತರಣೆ, ವಾಟರ್ ಫಿಲ್ಟರ್ ಕೊಡುಗೆ, ಹಳ್ಳಿ ಪ್ರದೇಶ ಶಾಲೆಯ ಹೆಣ್ಣು ಮಕ್ಕಳಿಗೆ ಶೌಚಾಲಯದ ನಿರ್ಮಾಣ, ಮೈಸೂರಿನ ಹೆಸರಾಂತ ಸರ್ಕಾರಿ ಕೆ.ಆರ್.ಹಾಸ್ಪಿಟಲ್‌ನಲ್ಲಿ ಮಹಿಳೆಯರಿಗಾಗಿ ಮಕ್ಕಳಿಗೆ ಹಾಲು ಕುಡಿಸುವ ಕೊಠಡಿ ನಿರ್ಮಾಣ, ಅಂಧ ಮಕ್ಕಳ ಶಾಲೆಯಲ್ಲಿ ಪ್ರತಿ ತಿಂಗಳು ನಿರಂತರವಾಗಿ 12 ತಿಂಗಳು ಉಪಹಾರ ಕೊಡುವ ಮೂಲಕ ಹಸಿವು ನಿವಾರಣ ಕಾರ್ಯಕ್ರಮ, ದಸರಾ ಮಹೋತ್ಸವ ಜಂಬೂ ಸವಾರಿಯ ದಿನ ಕಲಾವಿದರಿಗೆ ಮತ್ತು ಪ್ರೇಕ್ಷಕರಿಗೆ 25000 ಮಿನೆರಲ್ ವಾಟರ್ ವಿತರಣೆ ಮುಂತಾದ ಹಲವು ಸೇವಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದಾರೆ.

ಅವರ ಈ ಸೇವಾ ಕಾರ್ಯಕ್ರಮಗಳನ್ನು ಗುರುತಿಸಿ ಲಯನ್ಸ್ ಜಿಲ್ಲೆ 3170  ಬೆಸ್ಟ್ ಪ್ರೆಸಿಡೆಂಟ್ ಹಾಗೂ ಬೆಸ್ಟ್ ಕ್ಲಬ್ ಎಂದು ಪ್ರಶಸ್ತಿಯನ್ನು ನೀಡಿತ್ತು. ಇದೀಗ ಬೆಂಗೂರಿನಲ್ಲಿ ನಡೆದ ರಾಜ್ಯಪಾಲರ ಕ್ಯಾಬಿನೆಟ್ ಪದಗ್ರಹಣ ಸಂದರ್ಭದಲ್ಲಿ ವಲಯ ಅಧ್ಯಕ್ಷರಾಗಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರು ಸಾಮಾಜಿಕ ಅಲ್ಲದೆ ದಾರ್ಮಿಕ ಕ್ಷೇತ್ರದಲ್ಲೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.