ಮಡಂತ್ಯಾರು: ವಜ್ರ ಮಹೋತ್ಸವ ಸ್ಮಾರಕ ಕಟ್ಟಡದ ಶಿಲಾನ್ಯಾಸ

ಮಡಂತ್ಯಾರು: ಮಹಿಳಾ ಮಂಡಲ ಮಡಂತ್ಯಾರು ವಜ್ರಮಹೋತ್ಸವವು 2018-19 ರ ಆಚರಣೆಯ ಸಂದರ್ಭದಲ್ಲಿ ವಜ್ರಮಹೋತ್ಸವದ ಸವಿನೆನಪಿಗಾಗಿ ಮಹಿಳಾ ಕೌಶಲಾಭಿವೃದ್ಧಿ ಕೇಂದ್ರದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ನ.1 ರಂದು ಮಹಿಳಾಮಂಡಲ ಆವರಣದಲ್ಲಿ ಜರಗಿತು.
ಮಡಂತ್ಯಾರು ಚರ್ಚ್‌ನ ಧರ್ಮಗುರು ಫಾ| ಬೇಸಿಲ್ ವಾಸ್ ಕೆಸರುಕಲ್ಲು ಹಾಕುವುದರ ಮೂಲಕ ಶಂಕುಸ್ಥಾಪನೆಯನ್ನು ನೆರವೇರಿಸಿದರು. ನಂತರ ದೀಪಬೆಳಗಿಸಿ ಮಹಿಳೆಯರನ್ನು ಉದ್ದೇಶಿಸಿ ಷಷ್ಠಿ ಎಂದರೆ ಫಲನೀಡುವುದು. ಪುಟಾಣಿಗಳನ್ನು ಶಿಶುವಿಹಾರದಲ್ಲಿ ರೂಪಿಸಿ ಇವತ್ತು ಸಮಾಜಕ್ಕೆ ಈ ಮಕ್ಕಳನ್ನು ನೀಡುವ ಕೊಡುಗೆಯೇ ಮಹಿಳಾಮಂಡಲಕ್ಕೆ ಅಮೃತೋತ್ಸವ ಎಂದರು.
ಅಧ್ಯಕ್ಷತೆ ವಹಿಸಿ ವಿಜ್ಞಾಪನಾ ಪತ್ರ ಬಿಡುಗಡೆ ಮಾಡಿದ ಜಮಾತುಲ್ ಫಲಹಾ, ಜಿಲ್ಲಾ ಮಾಜಿ ಅಧ್ಯಕ್ಷರು ಹಾಜಿ ಅಬ್ದುಲ್ ಲತೀಫ್ ಸಾಹೆಬ್ ಕೊಲ್ಪೆದಬೈಲ್, 1959 ರಿಂದ ನಿರಂತರ ಚಟುವಟಿಕೆಗಳಿಂದ ಮಹಿಳಾಮಂಡಲವನ್ನು ಉಳಿಸಿ ಬೆಳೆಸಿದ ದೀರ್ಘಕಾಲದ ಅಧ್ಯಕ್ಷೆ ನಿವೃತ್ತ ಶಿಕ್ಷಕಿ ಲೂಸಿರೊಡ್ರಿಗಸ್‌ರವರ ತ್ಯಾಗ, ತಾಳ್ಮೆಯನ್ನು ಕೊಂಡಾಡಿದರು. ಮಾಜಿ ಪಂಚಾಯತ್ ಸದಸ್ಯ ರಿಚಾರ್ಡ್ ರೊಡ್ರಿಗಸ್ ಮಾತನಾಡುತ್ತಾ ಮಹಿಳಾಮಂಡಲದ ಸ್ಥಾಪನೆಗೆ ಬೆನ್ನೆಲುಬಾಗಿ ನಿಂತ ದಿ. ಡಜ್ಲ್ಯು.ಎಸ್ ರೊಡ್ರಿಗಸ್‌ರವರನ್ನು ಸ್ಮರಿಸಿದರು.
ಅತಿಥಿಗಳಾದ ಉದ್ಯಮಿ ಹಾಗೂ ಕೃಷಿಕ ಮುಡಯೂರು ವಿಠಲಶೆಟ್ಟಿ, ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ಲಿಯೊ ರೊಡ್ರಿಗಸ್ ಶುಭಹಾರೈಸಿದರು. ಉದ್ಯಮಿ ಅನಿಲ್ ಅಧಿಕಾರಿ ಶಿಶುವಿಹಾರದ ಮೊದಲ ವರ್ಷದ ವಿದ್ಯಾರ್ಥಿ ಉದ್ಯಮಿ ಸ್ಟ್ಯಾನಿ ಮಾಡ್ತಾ ಉಪಸ್ಥಿತರಿದ್ದರು. ವಜ್ರಮಹೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಜಯಂತ್ ಶೆಟ್ಟಿ ಬಂದ ಅತಿಥಿ ಹಾಗೂ ಸಭಿಕರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಮಿತಿಯ ಕಾರ್ಯದರ್ಶಿ ಐವನ್ ಸಿಕ್ವೇರಾ ವಂದನಾರ್ಪಣೆಗೈದರು. ಸವಿತಾ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಶಿಶುವಿಹಾರದ ಕಾರ್ಯಕರ್ತೆರಾದ ಭಾರತಿ ಮತ್ತು ಬಳಗ ಪ್ರಾರ್ಥನೆಗೈದರು.
ವೇದಿಕೆಯಲ್ಲಿ ಮಹಿಳಾ ಮಂಡಲದ ಅಧ್ಯಕ್ಷೆ ಲೂಸಿ ಫೆರ್ನಾಂಡಿಸ್, ಕಾರ್ಯದರ್ಶಿ ರೋಹಿಣಿ ಪಕಳ ಉಪಸ್ಥಿತರಿದ್ದರು. ಅಮೃತೋತ್ಸವ ಸಮಿತಿಯ ಎಲ್ಲಾ ಸದಸ್ಯರು, ಮಹಿಳಾ ಮಂಡಲದ ಸದಸ್ಯೆಯರು ಹಾಗೂ ಮಕ್ಕಳ ಹೆತ್ತವರು ಈ ಸಭೆಯಲ್ಲಿ ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.