ಧರ್ಮಸ್ಥಳ: ಪೋಲಿಸ್ ಠಾಣಾ ಸಂವಾದ ಕಾರ್ಯಕ್ರಮ

Advt_NewsUnder_1
Advt_NewsUnder_1

ಧರ್ಮಸ್ಥಳ: ದಕ್ಷಿಣ ಕನ್ನಡ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಬೆಳ್ತಂಗಡಿ, ಅರುಣೋದಯ ಮಹಾಸಂಘ ಬೆಳ್ತಂಗಡಿ ಇವರ ಜಂಟಿ ಆಶ್ರಯದಲ್ಲಿ ಧರ್ಮಸ್ಥಳ ವಲಯದ ಚಿಗುರು, ಸತ್ಯ ಹಾಗೂ ಆದರ್ಶ ಸ್ವ-ಸಹಾಯ ಸಂಘದ ಸದಸ್ಯರಿಗೆ ಪೋಲಿಸ್ ಇಲಾಖಾ ಜೊತೆ ಸಂವಾದ ಕಾರ್ಯಕ್ರಮವು  ಧರ್ಮಸ್ಥಳ ಚರ್ಚ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಧರ್ಮಸ್ಥಳ ಆರಕ್ಷಕ ಠಾಣೆಯ ಅಧಿಕಾರಿ ರವೀಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಹಿಳೆಯರಿಗೆ ದೌರ್ಜನ್ಯ ಸಂಭವಿಸಿದಾಗ ಯಾವ ರೀತಿ ಕೇಸನ್ನು ದಾಖಲಿಸಬಹುದು ಎನ್ನುವುದರ ಬಗ್ಗೆ ಸಂವಾದ ನಡೆಸಿದರು. ಜೊತೆಗೆ ಪೋಕ್ಸೋ ಕಾಯಿದೆಯ ಬಗ್ಗೆ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಶ್ರೀಮತಿ ಲಿಸಮ್ಮ ಮ್ಯಾಥ್ಯೂ ವಹಿಸಿದ್ದರು. ಶ್ರೀಮತಿ ಸಾಲಿರವರು ಸ್ವಾಗತಿಸಿ, ಶ್ರೀಮತಿ ಜಯ ಮೋನಪ್ಪರವರು ವಂದಿಸಿದರು. ಕಾರ್ಯಕರ್ತರಾದ ಮಾರ್ಕ್ ಡಿ’ ಸೋಜಾರವು ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.