ಮಲೆಬೆಟ್ಟು: ಮಾನಸಿಕ ಆರೋಗ್ಯ ಮಾಹಿತಿ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಲೆಬೆಟ್ಟು: ವಿಮುಕ್ತಿ ಸ್ವ-ಸಹಾಯ ಸಂಘಗಳ ಟ್ರಸ್ಟ್ ವತಿಯಿಂದ ಮಲೆಬೆಟ್ಟು ಘಟಕದ ಮಾನಸಿಕ ಆರೋಗ್ಯ ಮಾಹಿತಿ ಕಾರ್ಯಕ್ರಮವು ನ.2 ರಂದು ಮಲೆಬೆಟ್ಟು ಶಾಲೆಯಲ್ಲಿ ಜರುಗಿತು. ಮಾನಸಿಕ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಾ, ಸಾಮಾಜಿಕವಾಗಿ, ಅರ್ಥಿಕವಾಗಿ ದುರ್ಬಲರನ್ನು ಅಭಿವೃದ್ದಿಪಡಿಸುವುದು ನಮ್ಮ ಉದ್ದೇಶ. ಪ್ರತಿಯೊಬ್ಬ ಸದಸ್ಯರು ಮಾನಸಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಾರೆ. ಆದರೆ ಸಣ್ಣ ಪುಟ್ಟ ವಿಷಯಗಳಿಗೆ ನಮ್ಮ ಮನಸ್ಸನ್ನು ಕಳೆದುಕೊಳ್ಳಬಾರದು, ಮಹಿಳೆಯರು ಕುಟುಂಬದಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಆಗ ಮನಸ್ಸಿನ ಹತೋಟಿ ಕಳೆದು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ನಮ್ಮ ಮನಸ್ಸಿನ ನೋವನ್ನು ಇನ್ನೊಬ್ಬರಲ್ಲಿ ಹಂಚಿಕೊಂಡರೆ ನಮ್ಮ ಮನಸ್ಸಿನ ಭಾರ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ ಹಾಗೂ ಮೆದುಳು ಕೂಡ ಸರಿಯಾಗಿ ವರ್ತಿಸುತ್ತದೆ.
ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಮನೋವೈದ್ಯ ತಜ್ಞರು, ಸಮಾಜ ಕಾರ್ಯಕರ್ತರು ,ಆಶಾ ಕಾರ್‍ಯಕರ್ತರಲ್ಲಿ ಈ ವಿಷಯಗಳ ಬಗ್ಗೆ ತಿಳಿಸಿದರೆ ನಮಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಬಹುದು ಎಂಬುದಾಗಿ ತಿಳಿಸಿದರು.

ಘಟಕದ ಅಧ್ಯಕ್ಷೆ ಶ್ರೀಮತಿ ಲೀಲಾ, ಸಂಸ್ಥೆಯ ಸಹನಿರ್ದೇಶಕರಾದಂತಹ ಫಾ|ರೋಹನ್ ಲೋಬೋ, ಎಮ್.ಎಸ್.ಡಬ್ಲ್ಯುನ ವಿದ್ಯಾರ್ಥಿ  ನೌಶದ್, ಮೇಲ್ವಿಚಾರಕಿ ಕು|ರೋಹಿಣಿ, ವಲಯದ ಕಾರ್ಯಕರ್ತೆ  ಶ್ರೀಮತಿ ತ್ರೇಸಿಯಾ, ಚೈಲ್ಡ್ ಫಂಡ್ ಕಾರ್ಯಕರ್ತೆ ಶ್ರೀಮತಿ ಸವಿತಾ ಉಪಸ್ಥಿತರಿದ್ದರು. ಈ ಸಭೆಯಲ್ಲಿ 47 ಸದಸ್ಯರು ಪಾಲ್ಗೊಂಡಿದ್ದರು. ಶ್ರೀಮತಿ ತ್ರೇಸಿಯಾ  ಸ್ವಾಗತಿಸಿ, ಶ್ರೀಮತಿ ಶೋಭಾರವರು ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.