ವೇಣೂರು: ಹೈಮಾಸ್ಕ್ ದೀಪದ ಉದ್ಘಾಟನೆ

ವೇಣೂರು: ಇಲ್ಲಿಯ ಕ್ರಿಸ್ತರಾಜ ದೇವಾಲಯದ ಬಳಿ ವೇಣೂರು ಗ್ರಾ.ಪಂ ಅನುದಾನದಡಿ ನಿರ್ಮಿಸಲಾದ ಹೈಮಾಸ್ಕ್ ದೀಪದ ಉದ್ಘಾಟನೆಯು ನ.4 ರಂದು ಜರುಗಿತು. ಶಾಸಕ ಹರೀಶ್ ಪೂಂಜ ಉದ್ಘಾಟನೆಯನ್ನು ನೆರವೇರಿಸಿದರು.
ವೇಣೂರು ಕ್ರಿಸ್ತರಾಜ ದೇವಾಲಯದ ಧರ್ಮಗುರು ವಂ| ಸ್ಟ್ಯಾನಿ ರೋಡ್ರಿಗಸ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವೇಣೂರು ಗ್ರಾ.ಪಂ ಅಧ್ಯಕ್ಷೆ ಮೋಹಿನಿ ವಿ ಶೆಟ್ಟಿ, ವೇಣೂರು ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ, ಚರ್ಚ್ ಪಾಲನ ಪರಿಷತ್ ಕಾರ್ಯದರ್ಶಿ ಸ್ಟೀವನ್ ಡಿಕುನ್ಹಾ, ವೇಣೂರು ಗ್ರಾ.ಪಂ ಸದಸ್ಯರಾದ ಯಶೋಧರ ಹೆಗ್ಡೆ, ವಿಕ್ಟರ್ ಮಿನೇಜಸ್, ಜೆಸ್ಸಿ ಟೀಚರ್, ರಾಜೇಶ್ ಪೂಜಾರಿ ಮೂಡುಕೋಡಿ, ನೇಮಯ್ಯ ಕುಲಾಲ್, ಅಣ್ಣು, ಪುಷ್ಪಾ ಮತ್ತಿತರರು ಉಪಸ್ಥಿತರಿದ್ದರು.
ವೇಣೂರು ಗ್ರಾ.ಪಂ ಉಪಾಧ್ಯಕ್ಷ ಅರುಣ್ ಕ್ರಾಸ್ತಾ ಸ್ವಾಗತಿಸಿ, ಐಸಿವೈಎಂ ಸುವರ್ಣ ಮಹೋತ್ಸವ ಸಮಿತಿ ಕಾರ್ಯದರ್ಶಿ ಅನೂಪ್ ಜೆ ಪಾಯಸ್ ಕಾರ್ಯಕ್ರಮ ನಿರೂಪಿಸಿ, ಚರ್ಚ್ ಪಾಲನಾ ಪರಿಷತ್ ಸದಸ್ಯ ಡೆನ್ನಿಸ್ ಸಿಕ್ವೇರಾ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.