ಧರ್ಮಸ್ಥಳ: ನವೀಕೃತ ಕಾರಂಜಿಯ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಧರ್ಮಸ್ಥಳ ಇಲ್ಲಿನ ಶಾಲಾ ಆವರಣದ ನವೀಕೃತ ಕಾರಂಜಿ ಉದ್ಯಾನವನವನ್ನು ಶ್ರೀ ಧ. ಮ. ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಬಿ.ಸೋಮಶೇಖರ್ ಶೆಟ್ಟಿಯವರು ಲೋಕಾರ್ಪಣೆ ಮಾಡಿದರು.
ಈ ಹಿಂದೆ ಇದ್ದ ಉದ್ಯಾನವನವನ್ನು ನವೀಕರಿಸಿ ಉದ್ಘಾಟಿಸಿ ಮಾತನಾಡಿ, ಶಾಲೆಯು ಮಕ್ಕಳ ಹಾಜರಾತಿಯ ಹೆಚ್ಚಳದ ಜೊತೆಗೆ ಸಂತಸದ ಕಲಿಕೆಯ ವಾತವರಣಕ್ಕೆ ಇದು ಅವಶ್ಯ ಎಂದರು. ಮಕ್ಕಳಿಗೆ ಈ ಕಾರಂಜಿಯು ಮನಸ್ಸಿಗೆ ಮುದ ನೀಡುವುದಲ್ಲದೇ ಆಕರ್ಷಣೀಯವಾಗಿದೆ. ಈ ಶಾಲೆಯಲ್ಲಿ ನೀಡುವ ಗುಣಮಟ್ಟದ ಶಿಕ್ಷಣ, ಭೌತಿಕ ವ್ಯವಸ್ಥೆಗಳಿಂದಾಗಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ ಎಂದರು.
ಶಾಲಾ ಮುಖ್ಯೋಪಾಧ್ಯಾಯರಾದ ಪಿ. ಸುಬ್ರಹ್ಮಣ್ಯ ರಾವ್ ಪಡ್ವೆಟ್ಟಾಯ ಮಾತನಾಡಿ ಶಾಲೆಯಲ್ಲಿರುವ ಭೌತಿಕ ವ್ಯವಸ್ಥೆಗಳನ್ನು ಉಳಿಸಿಕೊಳ್ಳುವಲ್ಲಿ ಶ್ರಮಿಸಿದ್ದೇನೆ. ಅಂತೆಯೇ ಹಿಂದೆ ಇದ್ದ ಈ ತೋಟವನ್ನು ಅಲ್ಪ-ಸ್ವಲ್ಪ ಬದಲಾವಣೆಗಳೊಂದಿಗೆ ನವೀಕರಿಸಲಾಗಿದೆ. ಮಕ್ಕಳ ಸಂತಸದ ಕಲಿಕೆಗೆ ಇದು ಸ್ಪೂರ್ತಿಯಾಗಲಿ ಎಂದರು.
ಇದರ ನಿರ್ಮಾಣ ಕಾರ್ಯ ನಿರ್ವಹಿಸಿದ ಗೋಪಾಲ್ ಹಾಗೂ ಪ್ರವೀಣರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಶಾಲಾ ಮಕ್ಕಳ ಪ್ರಾರ್ಥನೆ ಬಳಿಕ ಹಿರಿಯ ಶಿಕ್ಷಕಿ ಗಿರಿಜಾ ಕುಮಾರಿ ಸ್ವಾಗತಿಸಿ, ಲಕ್ಷಣ್ ಗೌಡ ಹಾಗೂ ಶೇಖರ್ ಗೌಡ ನಿರೂಪಿಸಿ, ಶಿಕ್ಷಕಿ ಶ್ರೀಜಾ ಎ ಧನ್ಯವಾದವಿತ್ತರು. ಎಲ್ಲಾ ಶಿಕ್ಷಕ ವೃಂದ ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.