ನಾರಾವಿ: 64 ನೇ ವನ್ಯಜೀವಿ ಸಪ್ತಾಹ

ನಾರಾವಿ: ಕರ್ನಾಟಕ ಅರಣ್ಯ ಇಲಾಖೆ ಕುಂದಾಪುರ ವಿಭಾಗ, ಮೂಡುಬಿದರೆ ಉಪವಿಭಾಗ, ವೇಣೂರು ವಲಯ ಹಾಗೂ ಸಂತ ಅಂತೋನಿ ಕಾಲೇಜು ನಾರಾವಿ ಇದರ ಆಶ್ರಯದಲ್ಲಿ 64 ನೇ ವನ್ಯಜೀವಿ ಸಪ್ತಾಹದ ಪ್ರಶಸ್ತಿ ಪ್ರದಾನ ಸಮಾರಂಭವು  ನ.2 ರಂದು ಕಾಲೇಜು ಸಭಾಂಗಣದಲ್ಲಿ  ಜರುಗಿತು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಹರೀಶ ಪೂಂಜ , ವನ್ಯ ಜೀವಿಗಳು ಹಾಗೂ ಜನ ಜೀವನ ಒಂದಕ್ಕೊಂದು ಪೂರಕವಾದವುಗಳು. ಹೀಗಾಗಿ ವನ್ಯಜೀವಿಗಳ ಅಳಿವು ಉಳಿವು ನಮ್ಮ ಕೈಯಲ್ಲಿಯೇ ಇದೆ. ನಾವು ಸಮಾಕ್ಕೊಸ್ಕರ, ಪರರಿಗೋಸ್ಕರ ಏನು ಮಾಡುತ್ತಿದ್ದೇವೆ ಎಂಬ ಚಿಂತನೆ ಬರಬೇಕಾಗಿದೆ. ಹಿರಿಯರು ಆಶಿಸಿದ ವಸುದೈವ ಕುಟುಂಬಕಂ ಸೂತ್ರ ಮತ್ತೆ ಮೇಲೆಳಬೇಕಾಗಿದೆ. ಇಂದಿನ ವಿದ್ಯಾರ್ಥಿಗಳು ಇಂದಿನ ಪ್ರಜೆಗಳೇ. ಹೀಗಾಗಿ ಬದಲಾವಣೆ ಇಂದಿನಿಂದಲೇ ಮಾಡೋಣ ಎಂದರು. ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸ್ವಾಮಿ ಸೈಮನ್ ಡಿ’ಸೋಜ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಕುಂದಾಪುರ ವಿಭಾಗ ಉಪಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಕಾಲೇಜು ಪ್ರಾಚಾರ್ಯ ಸ್ವಾಮಿ ಅರುಣ್ ವಿಲ್ಸನ್ ಲೋಬೋ, ಉಪಪ್ರಾಚಾರ್ಯ ಸಂತೋಷ್ ಸಾಲ್ದಾನಾ. ನಾರಾವಿ ಗ್ರಾ.ಪಂ. ಅಧ್ಯಕ್ಷ ರವೀಂದ್ರ  ಪೂಜಾರಿ, ಮೂಡಬಿದರೆ ಉಪವಿಭಾಗ ಸಹಾಯಕ ಅರಣ್ಯ ಅಧಿಕಾರಿ ಎಂಎಂ.ಅಚ್ಚಪ್ಪ, ವಲಯಾರಣ್ಯಾಧಿಕಾರಿ ಪ್ರಕಾಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಕಾಲೇಜಿನ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು. ಸಪ್ತಾಹದಂಗವಾಗಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿಶೇಷ ಸೇವೆ ಸಲ್ಲಿಸಿದ ಅರಣ್ಯ ಇಲಾಖಾ ಸಿಬ್ಬಂದಿಗಳನ್ನು ಪುರಸ್ಕರಿಸಲಾಯಿತು. ವಿಟ್ಲ ಸಸ್ಯಶ್ಯಾಮಲದ ದಿನೇಶ್ ನಾಯಕ್ ಹಾಗೂ ಭುವನೇಶ್ ಕೈಕಂಬ ಅವರು ಉಪನ್ಯಾಸ ನೀಡಿದರು.
ವೇಣೂರು ವಲಯ ಅರಣ್ಯಾಧಿಕಾರಿ ಪ್ರಶಾಂತ ಕುಮಾರ್ ಪೈ ಸ್ವಾಗತಿಸಿ, ಉಪ ವಲಯ ಅರಣ್ಯಾಧಿಕಾರಿ ಅಜಿತ್‌ ಕುಮಾರ್ ವಂದಿಸಿ, ಉಪನ್ಯಾಸಕ ಅವಿಲ್ ಮೊರಾಸ್ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.