ಅಬುದಾಬಿ ‘ಬಿಗ್ ಟಿಕೆಟ್’ ಸ್ಪರ್ಧೆಯ ಟಾಪ್ 20 ರಲ್ಲಿ ಪುತ್ತೂರಿನ ಹನೀಫ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪುತ್ತೂರು: ಅಬುದಾಬಿ ‘ಬಿಗ್ ಟಿಕೆಟ್ ಸ್ಪರ್ಧೆಯ ಟಾಪ್ 20 ರಲ್ಲಿ ಪುತ್ತೂರಿನ ಹನೀಫ್  ಸ್ಪರ್ಧಿಸುತ್ತಿದ್ದಾರೆ. ಇವರನ್ನು ವೋಟ್ ಮಾಡಿ ಗೆಲ್ಲಿಸಿದರೆ ಬಡವರ ವಿದ್ಯೆಗೆ ಅತ್ಯಾಧುನಿಕ ಕಂಪ್ಯೂಟರ್ ಬಸ್ ವ್ಯವಸ್ಥೆ ಪುತ್ತೂರಿನಲ್ಲಿ ಆಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಬಲ್ಲೇರಿಯ ಕೂಲಿ ಕಾರ್ಮಿಕ ಅಬ್ಬಾಸ್ ಹಾಜಿ ರವರ ಪುತ್ರ ಮಹಮ್ಮದ್ ಹನೀಫ್ ರವರು ಪ್ರಸ್ತುತ ದುಬೈ ಯುನಿವರ್ಸಿಟಿಯ ಮಹಮ್ಮದ್ ಬಿನ್ ರಾಶಿದ್ ಸ್ಪೇಸ್ ಸೆಂಟರ್ ಲ್ಯಾಬ್ ನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಉದ್ಯೋಗದಲ್ಲಿದ್ದಾರೆ. ಊರಿನ ಶ್ರೇಯೋಭಿವೃದ್ಧಿ ಬಗ್ಗೆ ಬಹಳಷ್ಟು ಕನಸು ಕಟ್ಟಿಕೊಂಡಿರುವ ಹನೀಫ್ ಎಲೆಮರೆ ಕಾಯಿಯಂತೆ ಬಡವರಿಗೆ ಸದ್ದಿಲ್ಲದೇ ಸೇವೆ ಮಾಡುತ್ತಿದ್ದಾರೆ. ಅವರು ಕರಾವಳಿಯಲ್ಲಿ ಗುರುತಿಸಿಕೊಂಡಿರುವ ಮಂಗಳೂರು ಎಂ.ಫ್ರೆಂಡ್ಸ್ ಸಂಸ್ಥೆಯ ಯುಎಇ ಪ್ರಾಂತ್ಯದ ನಿರ್ದೇಶಕರೂ ಹೌದು. ಹನೀಫ್ ಪುತ್ತೂರು ಬಡತನದಲ್ಲಿ ಬೆಳೆದವರು. ಆ ದಿನಗಳಲ್ಲಿ ತಂದೆ ಕೂಲಿ ಕಾರ್ಮಿಕರಾಗಿದ್ದರು. ಶ್ರಮಪಟ್ಟು ಕಲಿತ ಕಾರಣ ಹನೀಫ್ ಹಾಸನದ ಮಲ್ನಾಡ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರೋನಿಕ್ಸ್ & ಕಮ್ಯುನಿಕೇಶನ್ ಎಂಜಿನಿಯರಿಂಗ್ ಪದವಿ ಪಡೆದು ಪ್ರಸ್ತುತ ಯುಎಇಯಲ್ಲಿ ಉತ್ತಮ ಕೆಲಸದಲ್ಲಿದ್ದಾರೆ.
ಏನಿದು ಬಿಗ್ ಟಿಕೆಟ್?: ಅಬುದಾಭೀ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಡ್ಯೂಟಿ ಫ್ರೀ, ಏಶ್ಯಾನೆಟ್ ಸಹಯೋಗದಲ್ಲಿ ಡಿಯರ್ ಬಿಗ್ ಟಿಕೆಟ್ ಎಂಬ ಸ್ಪರ್ಧೆ ನಡೆಯುತ್ತಿದೆ. ಈ ಹಿಂದೆ ಬಿಗ್ ಟಿಕೆಟ್ ವತಿಯಿಂದ ಮಿಲಿಯನ್ ದಿರ್ಹಮ್ ಕ್ಯಾಶ್ ಪ್ರೈಸ್, ಅಂತರಾಷ್ಟ್ರ ಬ್ರಾಂಡ್ ಕಾರು ಬಹುಮಾನವಾಗಿ ವಿಜೇತರಿಗೆ ನೀಡುತ್ತಿತ್ತು. ಆದರೆ ಈ ಬಾರಿ ವಿಶೇಷ ಯೋಜನೆಯೊಂದಿಗೆ ಬಿಗ್ ಟಿಕೆಟ್ ಯುಎಇಯಲ್ಲಿರುವ ಜನರನ್ನು ಸ್ಪರ್ಧೆಗೆ ಆಹ್ವಾನಿಸಿದೆ. ಗರಿಷ್ಠ 10 ಮಿಲಿಯನ್ ದಿರ್ಹಮ್ ವರೆಗೆ (20 ಕೋಟಿ ರೂ.) ಕೊಟ್ರೆ ನೀನೇನು ಮಾಡುತ್ತೀಯಾ ಎಂಬ ಸ್ಪರ್ಧೆ ಏರ್ಪಡಿಸಿದೆ. ಸುಮಾರು ಇಪ್ಪತ್ತು ಸಾವಿರಕ್ಕೂ ಅಧಿಕ ಮಂದಿ ಈ ಸ್ಪರ್ಧೆಗೆ ಅರ್ಜಿ ಹಾಕಿದ್ದಾರೆ. ಅದರಲ್ಲಿ ಟಾಪ್ 20 ಮಂದಿಯನ್ನು ಬಿಗ್ ಟಿಕೆಟ್ ಸಂಸ್ಥೆ ಈಗಾಗಲೇ ಆರಿಸಿದೆ. ಅದರಲ್ಲಿ ಪುತ್ತೂರಿನ ಮಹಮ್ಮದ್ ಹನೀಫ್ ಸ್ಥಾನ ಪಡೆದಿದ್ದಾರೆ.

 ಆ 20 ಜನರ ವೀಡಿಯೋ ತುಣಕನ್ನು, ಟಿವಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ. ಅವರಿಗೆ ವಿಶ್ವದ ಸಾರ್ವಜನಿಕರು ವೋಟ್ ಮಾಡಬೇಕು. ವೋಟ್ ನಲ್ಲಿ ಗೆದ್ದ ಟಾಪ್ 5 ಜನರನ್ನು ಆಯ್ಕೆ ಮಾಡಿ ಬಹುಮಾನ ನೀಡಲಾಗುತ್ತದೆ. 20 ಕೋಟಿ ರೂಪಾಯಿವರೆಗೆ (ಬಹುಮಾನದ ನಿಖರ ಮೊತ್ತ ಇನ್ನೂ ಪ್ರಕಟಿಸಿಲ್ಲ.) ಬಹುಮಾನವಾಗಿ ಸಿಕ್ಕಿದರೆ ಮಹಮ್ಮದ್ ಹನೀಫ್ ಪುತ್ತೂರು ಪರಿಸರದ ವಿದ್ಯಾ ಸಂಸ್ಥೆಗಳಿಗೆ ಯಾರೂ ಊಹಿಸದ ದೊಡ್ಡ ಕೊಡುಗೆಯನ್ನೇ ನೀಡಲಿದ್ದಾರೆ. ಪುತ್ತೂರು ಪರಿಸರದಲ್ಲಿ ಕಂಪ್ಯೂಟರ್ ಮೊಬೈಲ್ ಬಸ್ ಸ್ಥಾಪಿಸಲು ಯೋಜನೆ ಹಾಕಿಕೊಂಡಿರುವ ಹನೀಫ್ ಒಂದು ಬಸ್ಸಲ್ಲಿ 50 ಲ್ಯಾಪ್ಟಾಪ್ ಕಂಪ್ಯೂಟರ್, ಸೋಲಾರ್ ಫ್ಯಾನ್, ಜನರೇಟರ್ ಅಳವಡಿಸಿ ತಂತ್ರಜ್ಞಾನ ಶಿಕ್ಷಕರನ್ನು ಇರಿಸಿ ದಿನಕ್ಕೆ 5 ಶಾಲೆಗಳಿಗೆ ತೆರಳಿ ಬಡ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ನೀಡುವುದು ಹನೀಫ್ ಕನಸು. ಹೀಗೇ ಮಾಡಿದರೆ ಒಂದು ವಾರದಲ್ಲಿ 25 ಶಾಲೆಗಳನ್ನು ಬಳಸಿದಂತಾಗುತ್ತದೆ. ಒಂದು ಬಸ್ಸಿಗೆ 2 ಕೋಟಿ ರೂ. ಬಜೆಟ್ ಇಟ್ಟುಕೊಂಡು ಎಲ್ಲಿಯಾದರೂ ಗರಿಷ್ಠ ಪ್ರಮಾಣದ 20 ಕೋಟಿ ರೂ. ಸಿಕ್ಕಿದರೆ 250 ಶಾಲೆಗಳಿಗೆ ಪ್ರತಿವಾರ ಕಂಪ್ಯೂಟರ್ ಬಸ್ ತೆರಳಲು ಸಾಧ್ಯವಾಗುತ್ತದೆ. ಒಂದು ವಾರ ಕಂಪ್ಯೂಟರ್ ಲ್ಯಾಬ್, ಇನ್ನೊಂದು ವಾರ ರೋಬೋಟಿಕ್ಸ್ ಲ್ಯಾಬ್, ಮತ್ತೊಂದು ವಾರ ಕಂಪ್ಯೂಟರ್ ಸ್ಕಿಲ್ ಡೆವಲಪ್ಮೆಂಟ್, ಮಗದೊಂದು ವಾರ ಮೆಡಿಕಲ್ ಚೆಕಪ್ ಮಾಡುವ ಉದ್ದೇಶ ಹನೀಫ್ರದ್ದು. ಗ್ರಾಮೀಣ ಪ್ರದೇಶದ ಮಕ್ಕಳು ಕಲಿಕೆ, ಅಂಕಗಳಲ್ಲಿ ಮುಂದಿದ್ದರೂ ಕಂಪ್ಯೂಟರ್ ವಿದ್ಯೆಯಲ್ಲಿ ಹಿಂದುಳಿದಿರುವ ಕಾರಣ ಉದ್ಯೋಗದಲ್ಲಿ ವಿದೇಶಿಗರೊಂದಿಗೆ ಸ್ಪರ್ಧಿಸಿ ಗೆಲ್ಲುವುದು ಕಷ್ಟಸಾಧ್ಯ. ಶ್ರೀಮಂತರ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಸಿಕ್ಕರೂ ಬಡ ಅಶಕ್ತರ ಪಾಲಿಗೆ ಕನಸಿನ ಮಾತು ಎನ್ನುತ್ತಾರೆ ಹನೀಫ್. ಅದಕ್ಕಾಗಿ ಕಂಪ್ಯೂಟರ್ ಬಸ್ ಯೋಜನೆ ಕನಸು ಕಂಡಿದ್ದೇನೆ. ಯಾವುದಕ್ಕೂ ಬಿಗ್ ಟಿಕೆಟ್ನಲ್ಲಿ ವಿಜೇತನಾಗಬೇಕು. ಕನಸು ಸಾಕಾರವಾಗಬಹುದು ಎನ್ನುತ್ತಾರೆ.
ವೋಟ್ ಮಾಡಿ ಗೆಲ್ಲಿಸಿದರೆ ಬಡವರ ಮಕ್ಕಳ ವಿದ್ಯೆಗೆ ಕಂಪ್ಯೂಟರ್ ಬಸ್ ವ್ಯವಸ್ಥೆ
ತನಗೆ ವೋಟ್ ಮಾಡಿ ಗೆಲ್ಲಿಸಿದರೆ ಪುತ್ತೂರಿನಲ್ಲಿ ಬಡವರ ವಿದ್ಯೆಗೆ ಅತ್ಯಾಧುನಿಕ ಕಂಪ್ಯೂಟರ್ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ಹನೀಫ್ ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಅವರನ್ನು ವೋಟ್ ಮಾಡಿ ಗೆಲ್ಲಿಸಲು ವಿನಂತಿಸಲಾಗಿದೆ.
ಹನೀಫ್ರವರನ್ನು ಗೆಲ್ಲಿಸಲು ಬಯಸುವವರು ಮಾಡಬೇಕಾದುದು ಇಷ್ಟೆ. ಮೊಬೈಲ್ ತೆಗೆದು www.abcmore.com ಅಥವಾ www.dearbigticket.ae ವೆಬ್ಸೈಟ್ ತೆರೆಯುವುದು. ಭಾರತೀಯ ಏಕೈಕ ಸ್ಪರ್ಧಿ ಪುತ್ತೂರಿನ ಮಹಮ್ಮದ್ ಹನೀಫ್ ಅವರ ಹೆಸರ ಜೊತೆಗಿರುವ vote now ಬಟನ್ ಕ್ಲಿಕ್ ಮಾಡುವುದು. ಅದರಲ್ಲಿ ಬರುವ ಆರಂಕೆಯ ಸೆಕ್ಯುರಿಟಿ ಕೋಡ್ ಟೈಪ್ ಮಾಡುವುದು. VOTE AS A GUEST ಕ್ಲಿಕ್ ಮಾಡುವುದು. ಅಲ್ಲಿಗೆ ನಮ್ಮ ಕೆಲಸ ಮುಗಿಯಿತು. ಆದರೆ ಇಷ್ಟು ಮಾಡಲಿಕ್ಕೆ ನಮ್ಮಲ್ಲಿ ಇನ್ನು ಉಳಿದಿರುವ ಸಮಯ ಕೇವಲ ಕೆಲವೇ ದಿನವಷ್ಟೆ. ವೋಟಿಂಗ್ ಸಮಯ ಭಾರತೀಯ ಕಾಲಮಾನ ನ. 3ರ ಮಧ್ಯರಾತ್ರಿ ಮುಗಿಯುತ್ತದೆ. ಆದ್ದರಿಂದ ಈ ಸಂದೇಶ ಓದಿದ ತಕ್ಷಣ ವೋಟ್ ಮಾಡಿ ನಮ್ಮ ಭಾರತೀಯನ ಕನಸನ್ನು ನನಸಾಗಿಸಬಹುದು. ಕೇವಲ 5 ಸೆಕೆಂಡಿನಲ್ಲಿ ಕುಳಿತಲ್ಲೇ ಬೆರಳ ತುದಿಯಿಂದ ಮೊಬೈಲ್ ಒತ್ತಿ ವೋಟ್ ಮಾಡುವ ಮೂಲಕ ಬಡ ಮಕ್ಕಳ ಕಂಪ್ಯೂಟರ್ ವಿದ್ಯಾಭ್ಯಾಸಕ್ಕೆ ಕೊಡುಗೆ ನೀಡಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.