ಮಲವಂತಿಗೆ ಹಾಲು ಉತ್ಪಾದಕರ ಸಹಕಾರ ಸಂಘ ನೂತನ ಕಟ್ಟಡ ಉದ್ಘಾಟನೆ

ಮಲವಂತಿಗೆ: ಮಲವಂತಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ‘ನಂದಗೋಕುಲ ‘ಇದರ ಉದ್ಘಾಟನಾ ಕಾರ್ಯಕ್ರಮವು ಇಂದು (ನ.2) ಜರುಗಿತು. ದ.ಕ ಹಾಲು ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ರವಿರಾಜ್ ಹೆಗ್ಡೆ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ, ಸಂಸ್ಥೆಗೆ ಶುಭ ಹಾರೈಸಿದರು. ಶಾಸಕ ಹರೀಶ್ ಪೂಂಜ ಸಭಾಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ  ದ.ಕ ಹಾಲು ಒಕ್ಕೂಟದ ನಿರ್ದೇಶಕರುಗಳಾದ ಬಿ. ನಿರಂಜನ್, ಪದ್ಮನಾಭ ಅರ್ಕಜೆ, ಶ್ರೀಮತಿ ವೀಣಾ ರೈ, ನಾರಾಯಣ ಪ್ರಕಾಶ್, ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ ಸತ್ಯನಾರಾಯಣ, ಉಪಸ್ಥಿತರಿದ್ದರು.  ದ.ಕ.ಹಾಲು ಒಕ್ಕೂಟ ವ್ಯವಸ್ಥಾಪಕ ಡಾ|ನಿತ್ಯಾನಂದ ಭಕ್ತ, ಉಪವ್ಯವಸ್ಥಾಪಕ ಡಾ|ಎಂ. ರಾಮ ಕೃಷ್ಣ ಭಟ್, ಲಾಯಿಲ ಜಿ.ಪಂ ಸದಸ್ಯೆ ಶ್ರೀಮತಿ ಸೌಮ್ಯಲತಾ ಜಯಂತ ಗೌಡ,  ಮಲವಂತಿಗೆ ಗ್ರಾ.ಪಂ. ಅಧ್ಯಕ್ಷ ಭಾಸ್ಕರ ಪೂಜಾರಿ, ನಂದಿ ಕಾಡು ಎನ್. ಮಂಜಪ್ಪ ಹೆಗ್ಡೆ, ಮಲವಂತಿಗೆ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಕ ಅಧ್ಯಕ್ಷ ವಿರೇಶ್ವರ ಮರಾಠೆ ಗೌರವ ಉಪಸ್ಥಿತರಿದ್ದರು.

 ಸಂಘದ ಅಧ್ಯಕ್ಷ ಕೆ.ಗೋಪಾಲ ಗೌಡ, ಡಾ| ದಿನೇಶ್ ಸರಳಾಯ ಪಶು ವೈದ್ಯಾಧಿಕಾರಿ, ವಿಸ್ತಾರಣಾಧಿಕಾರಿ ಯಮುನಾ, ಉಪಾಧ್ಯಕ್ಷೆ ಶ್ರೀಮತಿ ಶುಭಲಕ್ಷ್ಮೀ, ಕಾರ್ಯದರ್ಶಿ ಶ್ರೀಮತಿ ವೇದಾ ಯಶೋಧರ ಗೌಡ , ಸಂಘದ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.