ವೇಣೂರು ವಲಯ ಪಿಂಚಣಿದಾರರ ಸಮಾವೇಶ

ವೇಣೂರು: ಕಾರ್ಮಿಕರ, ನೌಕರರ ಪಿಂಚಣಿ ಸೌಲಭ್ಯಗಳನ್ನು ಕೇಂದ್ರ ಸರ್ಕಾರ ಕಸಿಯುವ ಮೂಲಕ ಬಡವರ ಮೇಲೆ ದೌರ್ಜನ್ಯ ನಡೆಸುತ್ತಿದೆ. ಪಿಂಚಣಿ ಸೌಲಭ್ಯ ಸೌಲಭ್ಯ ಭಿಕ್ಷೆ ಅಲ್ಲ. ಅದು ಸಂವಿಧಾನಬದ್ಧ ಹಕ್ಕು. ಅದನ್ನು ಕಸಿಯಲು ಸಿಐಟಿಯು ಅವಕಾಶ ನೀಡುವುದಿಲ್ಲ ಎಂದು ಮೂಡಬಿದಿರೆ ಪುರಸಭಾ ಸದಸ್ಯೆ , ಸಿಐಟಿಯು ನಾಯಕಿ ರಮಣಿ ಮೂಡಬಿದಿರೆ ಹೇಳಿದರು.

ಅವರು ವೇಣೂರು ಜೆಪಿ ಟವರ್ಸ್ ನ ಸಭಾಂಗಣದಲ್ಲಿ ಸಿಐಟಿಯು ನೇತೃತ್ವದ ವೇಣೂರು ವಲಯ ಪಿಂಚಣಿದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಹಲವಾರು ಹೋರಾಟದ ಫಲವಾಗಿ ಜ್ಯಾರಿಯಾದ ಕಾರ್ಮಿಕರ ಪಿಂಚಣಿ ಸೌಲಭ್ಯಗಳನ್ನು ದೇಶದ ಬಂಡವಾಳಶಾಹಿ ವ್ಯವಸ್ಥೆಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಕಸಿಯಲಾಗುತ್ತಿದೆ. ಕಾರ್ಮಿಕರು , ನೌಕರರು ತಮ್ಮ ಬೆವರನ್ನು ಹರಿಸಿ ದೇಶ ಕಟ್ಟುವ ಕಾರ್ಯ ಮಾಡುತ್ತಿದ್ದಾರೆ ಅಂತಹ ಕಾರ್ಮಿಕರ, ನೌಕರರ ಸವಲತ್ತುಗಳನ್ನು ಬೆವರು ಸುರಿಸದೆ ಜೀವನ ನಡೆಸುವ ಬಂಡವಾಳಶಾಹಿಗಳಿಗೆ ಲಾಭ ಮಾಡುವ ಉದ್ದೇಶದಿಂದ ಕೋಟ್ಯಾಂತರ ಕಾರ್ಮಿಕ , ನೌಕರರನ್ನು ವಂಚಿಸಲಾಗುತ್ತಿದೆ. ಹೊಸ ಪಿಂಚಣಿ ನೀತಿ ಕೂಡ ಬಂಡವಾಳಗಾರರ ಪರವಾಗಿದ್ದು , ಅದರ ಬದಲಾವಣೆಗಾಗಿ ಸಿಐಟಿಯು ನಿರಂತರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ಸಿಐಟಿಯು ತಾಲೂಕು ಕಾರ್ಯದರ್ಶಿ ವಸಂತ ನಡ ಮಾತನಾಡಿ ಪಿಂಚಣಿದಾರರ ಹಿತ ಕಾಯಲು ಸಿಐಟಿಯು ತ್ಯಾಗಮಯ ಹೋರಾಟ ನಡೆಸಲಿದೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಾರ್ಮಿಕ, ನೌಕರರ ವಿರೋಧಿಯಾಗಿದ್ದು , ಕೇಂದ್ರ ಸರ್ಕಾರದ ಈ ಜನ ವಿರೋಧ ನೀತಿಯ ವಿರುದ್ಧ ಜನವರಿ 7-8 ರಂದು 48 ಗಂಟೆಗಳ ಕಾಲ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದರು.

ಸಿಐಟಿಯು ತಾಲೂಕು ಅಧ್ಯಕ್ಷ ಶಿವಕುಮಾರ್ ಎಸ್. ಎಂ ಸಭೆಯ ಅಧ್ಯಕ್ಷತೆ  ವಹಿಸಿದ್ದರು. ಸಿಐಟಿಯು ತಾಲೂಕು ಜತೆ ಕಾರ್ಯದರ್ಶಿ, ವೇಣೂರು ಪ್ರದೇಶ ಬೀಡಿ ಕಾರ್ಮಿಕ ಸಂಘದ ಕಾರ್ಯದರ್ಶಿ ರೋಹಿಣಿ ಪೆರಾಡಿ, ಜಯಂತಿ ನೆಲ್ಲಿಂಗೇರಿ, ಡಿವೈಎಫ್ಐ ಯುವ ನಾಯಕ ತಸ್ಲೀಫ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.