ನ.2: ಮಲವಂತಿಗೆ ಹಾಲು ಉತ್ಪಾದಕರ ಸಹಕಾರ ಸಂಘ ನೂತನ ಕಟ್ಟಡ ಉದ್ಘಾಟನೆ

ಮಲವಂತಿಗೆ: ಮಲವಂತಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಂದಗೋಕುಲ ಇದರ ಉದ್ಘಾಟನಾ ಕಾರ್ಯಕ್ರಮವು ನ.2 ರಂದು ನಡೆಯಲಿದೆ. ಉದ್ಘಾಟನೆಯನ್ನು ದ.ಕ ಹಾಲು ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ರವಿರಾಜ್ ಹೆಗ್ಡೆ ನೆರವೇರಿಸಲಿದ್ದಾರೆ.
ಶಾಸಕ ಹರೀಶ್ ಪೂಂಜ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ ಹಾಲು ಒಕ್ಕೂಟದ ಉಪಾಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ, ದ.ಕ ಹಾಲು ಒಕ್ಕೂಟದ ನಿರ್ದೇಶಕರುಗಳಾದ ಬಿ. ನಿರಂಜನ್, ಪದ್ಮನಾಭ ಅರ್ಕಜೆ, ಶ್ರೀಮತಿ ವೀಣಾ ರೈ, ನಾರಾಯಣ ಪ್ರಕಾಶ್, ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ ಸತ್ಯನಾರಾಯಣ, ಎಸ್.ಕೆ.ಆರ್ .ಡಿ.ಪಿ. ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಭಾಗವಹಿಸಿದ್ದಾರೆ.
ದ.ಕ.ಹಾಲು ಒಕ್ಕೂಟ ವ್ಯವಸ್ಥಾಪಕ ಡಾ|ನಿತ್ಯಾನಂದ ಭಕ್ತ, ಉಪವ್ಯವಸ್ಥಾಪಕ ಡಾ|ಎಂ. ರಾಮ ಕೃಷ್ಣ ಭಟ್, ಲಾಲ ಜಿ.ಪಂ ಸದಸ್ಯೆ ಶ್ರೀಮತಿ ಸೌಮ್ಯಲತಾ ಜಯಂತ ಗೌಡ, ಮಿತ್ತಬಾಗಿಲು ತಾ.ಪಂ. ಸದಸ್ಯ ಜಯರಾಮ ಎಂ.ಕೆ., ಮಲವಂತಿಗೆ ಗ್ರಾ.ಪಂ. ಅಧ್ಯಕ್ಷ ಭಾಸ್ಕರ ಪೂಜಾರಿ, ನಂದಿ ಕಾಡು ಎನ್. ಮಂಜಪ್ಪ ಹೆಗ್ಡೆ, ಮಲವಂತಿಗೆ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಕ ಅಧ್ಯಕ್ಷ ವಿರೇಶ್ವರ ಮರಾಠೆ ಗೌರವ ಉಪಸ್ಥಿತರಿರುತ್ತಾರೆ ಎಂದು ಸಂಘದ ಅಧ್ಯಕ್ಷ ಕೆ.ಗೋಪಾಲ ಗೌಡ, ಡಾ| ದಿನೇಶ್ ಸರಳಾಯ ಪಶು ವೈದ್ಯಾಧಿಕಾರಿ, ವಿಸ್ತಾರಣಾಧಿಕಾರಿ ಯಮುನಾ, ಉಪಾಧ್ಯಕ್ಷೆ ಶ್ರೀಮತಿ ಶುಭಲಕ್ಷ್ಮೀ, ಕಾರ್ಯದರ್ಶಿ ಶ್ರೀಮತಿ ವೇದಾ ಯಶೋಧರ ಗೌಡ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.