ಉಚಿತ ಗ್ಯಾಸ್ ಹಾಗೂ ವಸತಿ ಯೋಜನೆಯ ಆದೇಶ ಪತ್ರ ವಿತರಣಾ ಸಮಾರಂಭ

ಕಾಯರ್ತಡ್ಕ: ಪ್ರಧಾನಮಂತ್ರಿ ಉಜ್ವಲ ಉಚಿತ ಗ್ಯಾಸ್ ಯೋಜನೆ ಹಾಗೂ ವಸತಿ ಯೋಜನೆಯ ಆದೇಶ ಪತ್ರ ಇವುಗಳ ವಿತರಣಾ ಸಮಾರಂಭವು ಕಾಯರ್ತಡ್ಕ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅ.31 ರಂದು ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ಹರೀಶ್ ಪೂಂಜರವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಕಳೆಂಜ ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ಶಾರದಾ ವಹಿಸಿದ್ದರು. ಈ ಸಂದರ್ಭದಲ್ಲಿ ಕಳೆಂಜ ತಾ.ಪಂ. ಸದಸ್ಯೆ ಶ್ರೀಮತಿ ಸುಶೀಲ, ಪಂಚಾಯತ್ ಉಪಾಧ್ಯಕ್ಷರಾದ ರಾಜೇಶ್, ಪಂಚಾಯತ್ ಸದಸ್ಯರಾದ ಪ್ರವೀಣ್, ಧನಂಜಯ ಗೌಡ, ಹರೀಶ್ ಕೆ.ಬಿ., ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಗೌಡ, ದೇವಸ್ಥಾನದ ಸಮಿತಿಯ ಅಧ್ಯಕ್ಷರಾದ ಬಾಲಣ್ಣ ಗೌಡ ಕೈರೋಡಿ, ಅರಣ್ಯ ಪಾಲಕ ಪ್ರಶಾಂತ್ ಉಪಸ್ಥಿತರಿದ್ದರು. ಈ ಸಂದರ್ಭ 222 ಗ್ಯಾಸ್ ಕಿಟ್ ಹಾಗೂ 25 ವಸತಿ ಯೋಜನೆ ಆದೇಶ ಪತ್ರವನ್ನು ವಿತರಿಸಲಾಯಿತು.
ಪ್ರಕಾಶ್ ಕುಲಾಡಿ ಪ್ರಾರ್ಥಿಸಿ, ಹರೀಶ್ ಕೆ.ಬಿ. ಸ್ವಾಗತಿಸಿ, ವಿಶ್ವನಾಥ ವಂದಿಸಿದರು. ಶಿವಪ್ಪ ಗೌಡ ನೆಲ್ಲಿಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.