HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಪಟ್ಟಣ ಪಂಚಾಯತ್‌ನಲ್ಲಿ ಬಿಜೆಪಿಗೆ ಜಯಭೇರಿ: ಮುಗಿಲುಮುಟ್ಟಿದ ಕಾರ್ಯಕರ್ತರ ಸಂಭ್ರಮ

ಬೆಳ್ತಂಗಡಿ: ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ 11 ರಲ್ಲಿ 7 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದು ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರು ಬೆಳ್ತಂಗಡಿಯಲ್ಲಿ ಭಾರೀ ವಿಜಯೋತ್ಸವ ಆಚರಿಸಿದರು.
ಬಿಜೆಪಿ ಪಕ್ಷದಿಂದ ವಿಜಯಿಯಾದ ಅಂಬರೀಷ್ ಕಲ್ಲಗುಡ್ಡೆ, ರಜನಿ ಕುಡ್ವ, ಲೋಕೇಶ್, ತುಳಸಿ, ಗೌರಿ, ಮತ್ತು ಜಯಾನಂದ ಗೌಡ ಇವರು ಚುನಾವಣಾಧಿಕಾರಿಯಿಂದ ಪ್ರಮಾಣಪತ್ರ ಪಡೆದು ಮತಎಣಿಕೆ ಕೇಂದ್ರದಿಂದ ಹೊರಬರುತ್ತಿದ್ದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾರೀ ಹರ್ಷೋದ್ಗಾರದಿಂದ ಅವರನ್ನು ಬರಮಾಡಿಕೊಂಡರು.
ಶಾಸಕ ಹರೀಶ್ ಪೂಂಜ ಸಹಿತ ಗೆಲುವಾದ ಅಭ್ಯರ್ಥಿಗಳಿಗೆ ಜೈಕಾರ ಹಾಕಿ ಸಂಭ್ರಮಪಟ್ಟರು. ಜೊತೆಗೆ ಪರಾಭವಗೊಂಡ ಅಭ್ಯರ್ಥಿಗಳಿಗೂ ಹೂಹಾರ ಹಾಕಿ ಗೌರವಿಸಲಾಯಿತು.
ಶಾಸಕ ಹರೀಶ್ ಪೂಂಜ, ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ತಾ.ಪಂ ಉಪಾಧ್ಯಕ್ಷೆ ವೇದಾವತಿ, ಸದಸ್ಯ ಸುಧಾಕರ ಬಿ.ಎಲ್, ಮಾಜಿ ಸದಸ್ಯ ಜಯಂತ ಕೋಟ್ಯಾನ್, ಮಾಜಿ ಅಧ್ಯಕ್ಷ ಕೇಶವ ಮೊಗೇರ, ಬಿಜೆಪಿ ಕಾರ್ಯದರ್ಶಿಗಳಾದ ಪ್ರಭಾಕರ ಶೆಟ್ಟಿ ಉಪ್ಪಡ್ಕ ಮತ್ತು ಸೀತಾರಾಮ, ವಿಹಿಂಪ ಅಧ್ಯಕ್ಷ ಅಗರ್ತ ಸುಬ್ರಹ್ಮಣ್ಯ ಕುಮಾರ್, ಪ್ರಮುಖರಾದ ರಾಜೇಶ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ, ರಕ್ಷಿತ್ ಶೆಟ್ಟಿ, ಡಾ. ಪ್ರಮೋದ್ ಆರ್ ನಾಯ್ಕ್, ಬಾಲಕೃಷ್ಣ ಬಿರ್ಮೊಟ್ಟು, ಬಾಲಕೃಷ್ಣ ವಿ ಶೆಟ್ಟಿ ಸವಣಾಲು, ಗಿರೀಶ್ ಡೋಂಗ್ರೆ, ವಿನಯಚಂದ್ರ ಸೇನೆರೊಟ್ಟು, ರಾಜೇಶ್ ಪ್ರಭು, ಬಾಬು ಗೌಡ ಬೆಳ್ತಂಗಡಿ, ರಾಘವ ಕಲ್ಮಂಜ, ಮೋಹನ್‌ದಾಸ್ ಭೈರ, ಅಶೋಕ್ ಕೋಟ್ಯಾನ್, ಉಮೇಶ್ ಕೋಟ್ಯಾನ್, ಅರವಿಂದ ಶೆಟ್ಟಿ ಲಾಯಿಲ, ಹರೀಶ್ ಸಾಲಿಯಾನ್ ಮೋರ್ತಾಜೆ, ಗಣೇಶ್ ಗೌಡ ನಾವೂರು ಮೊದಲಾದ ಪ್ರಮುಖರು ಭಾಗಿಯಾಗಿದ್ದರು. ತೆರೆದ ವಾಹನದಲ್ಲಿ ನಗರದಲ್ಲಿ ಮೆರವಣಿಗೆ ನಡೆಸಿದ ಬಳಿಕ ಪ್ರತೀ ವಾರ್ಡ್‌ಗಳಿಗೂ ತೆರಳಿ ಗೆಲುವಿನ ಖುಷಿ ಹಂಚಿಕೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.