ಬೆಳ್ತಂಗಡಿ ನ.ಪಂ ಚುನಾವಣಾ ಫಲಿತಾಂಶ: ಬಿಜೆಪಿ 7ಸ್ಥಾನ, ಕಾಂಗ್ರೆಸ್‌ಗೆ 4ಸ್ಥಾನಗಳಲ್ಲಿ ಗೆಲುವು

Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ನಗರ ಪಂಚಾಯತ್‌ಗೆ ಅ.28 ರಂದು ಚುನಾವಣೆ ನಡೆದಿದ್ದು ಇದೀಗ ಫಲಿತಾಂಶ ಹೊರಬಂದಿದೆ.
1ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶ್ರೀ ರಮಣ್, 2ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಅಂಬರೀಶ್, 3ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಶರತ್ ಕುಮಾರ್, 4ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮತಿ ರಜನಿ ಕುಡ್ವ, 5ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ, 6ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುಸ್ತರ್‌ಜಾನ್, 7ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಲೋಕೇಶ್, 8ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ 9ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮತಿ ತುಳಸಿ, 10ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಕುಮಾರಿ ಗೌರಿ, 11ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಜಯಾನಂದ ಗೌಡ ಜಯಗಳಿಸಿದ್ದಾರೆ.

ನಗರ ಪಂಚಾಯತ ಚುನಾವಣೆಯಲ್ಲಿ 8ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಬೆಂಬಲಿತ ಜಗದೀಶ್ ಡಿ. ಅವರು 379 ಅತ್ಯಧಿಕ ಮತಗಳನ್ನು ಪಡೆದು ಸದಸ್ಯರಾಗಿ ಆಯ್ಕೆಯಾಗಿದ್ದಾರೆ.  ವಾರ್ಡ್ 7 ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಲೋಕೇಶ್ 364 ಮತಗಳನ್ನು ಪಡೆದು 219 ಅತೀ ಹೆಚ್ಚು ಅಂತರದ ಮತಗಳಿಂದ ಚುನಾಯಿತರಾಗಿದ್ದಾರೆ. ವಾರ್ಡ್ 6 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ನ.ಪಂ ಮಾಜಿ ಅಧ್ಯಕ್ಷೆ ಮುಸ್ತರ್‌ಜಾನ್ 135 ಮತ ಪಡೆದು 6 ಕನಿಷ್ಠ ಮತಗಳ ಅಂತರದಲ್ಲಿ ಗೆಲುವನ್ನು ಪಡೆದ ಸದಸ್ಯೆಯಾಗಿ ದಾಖಲಾಗಿದ್ದಾರೆ. ವಾರ್ಡ್ 5ರಲ್ಲಿ ಕಾಂಗ್ರೆಸ್ ಬೆಂಬಲಿತ ಜನಾರ್ದನ ಕುಂಬಾರ 2007 ಮತಗಳನ್ನು ಪಡೆದು 7 ಕನಿಷ್ಠ ಮತಗಳ ಅಂತರದಿಂದ ಗೆಲುವು ಸಾಧಿಸಿದ ಇನ್ನೋರ್ವ ಸದಸ್ಯರಾಗಿದ್ದಾರೆ.   11ನೇ ವಾರ್ಡ್‌ನಲ್ಲಿ ನಡೆದ ತ್ರಿಕೋನ ಸ್ಪರ್ಧೆಯಲ್ಲಿ ಬಿಜೆಪಿ ಅಭ್ಯರ್ಥಿ ಜಯಾನಂದ ಗೌಡ ಪಕ್ಷೇತರ ಅಭ್ಯರ್ಥಿ ಮುಗುಳಿ ನಾರಾಯಣ ರಾವ್ ಅವರನ್ನು 62 ಮತಗಳ ಅಂತರದಿಂದ ಹಿಂದಿಕ್ಕಿ ಗೆಲುವು ಸಾಧಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.