ಅಶ್ಲೀಲ ಫೋಟೊ ವೈರಲ್ ಮಾಡಿದ ಆರೋಪ ಐಟಿ ಕಾಯ್ದೆಯಡಿ ಕೇಸು ದಾಖಲು: ಬಂಧನ

Advt_NewsUnder_1
Advt_NewsUnder_1
Advt_NewsUnder_1

ಕಡಿರುದ್ಯಾವರ: ಮಹಿಳೆಯೊಬ್ಬರ ಜೊತೆ ಒಪ್ಪಿಗೆಯ ಸಂಬಂಧದ ಸಂದರ್ಭ ಪರಸ್ಪರ ಹಂಚಿಕೊಂಡಿದ್ದ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಮಾಡಿ ವೈರಲ್ ಆಗಿಸಿದ ಆರೋಪದಲ್ಲಿ ರಿಕ್ಷಾಚಾಲಕ ರೂಪೇಶ್ ಎಂಬವರನ್ನು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ಅ. 28 ರಂದು ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆಯ ಬಳಿಕ ಮರುದಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಅವರಿಗೆ ಶರತ್ತುಬದ್ಧ ಜಾಮೀನು ನೀಡಿದೆ.
ಗ್ರಾ.ಪಂ ಸಿಬಂದಿಯೂ, ವಿವಾಹವಾಗಿ ಇಬ್ಬರು ಮಕ್ಕಳಿರುವ ಮಹಿಳೆ ಜೊತೆ ರೂಪೇಶ್‌ಗೆ ಅನುಮಿತಯ ಸಂಬಂಧವಿತ್ತು. ಇತ್ತೀಚಿಗಿನ ದಿನಗಳಲ್ಲಿ ಇಬ್ಬರ ನಡುವೆ ವಿರಸವೇರ್ಪಟ್ಟಿದ್ದು ಇದೇ ಖೇದದಿಂದಿದ್ದ ರೂಪೇಶ್ ತಮ್ಮೊಳಗೆ ಖಾಸಗಿಯಾಗಿ ಹಂಚಿಕೊಂಡಿದ್ದ ಫೋಟೋ ಗಳನ್ನು ಆಕೆಯ ಒಪ್ಪಿಗೆಯ ವಿರುದ್ಧ ವೈರಲ್ ಮಾಡಿದ್ದರು. ಇದರಿಂದ ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಐಟಿ ಕಾಯ್ದೆಯಡಿ ಕೇಸು ದಾಖಲಿಸಿ ಬಂಧಿಸಿ ಕ್ರಮಕೈಗೊಳ್ಳಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.