ನ.1: ಬೆಳ್ತಂಗಡಿ ಲಯನ್ಸ್ ಭವನದಲ್ಲಿ `ಭಾರತೊಡು ತುಳು ರಾಜ್ಯೊ’ ವಿಚಾರಗೋಷ್ಠಿ

ಬೆಳ್ತಂಗಡಿ: ತುಳುನಾಡ್ ಒಕ್ಕೂಟ ಇದರ ಆಶ್ರಯದಲ್ಲಿ ನ.1ರಂದು ಬೆಳ್ತಂಗಡಿ ಲಯನ್ಸ್ ಭವನದಲ್ಲಿ `ಭಾರತೊಡು ತುಳು ರಾಜ್ಯೊ’ಎಂಬ ವಿಷಯದಲ್ಲಿ ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತುಳುನಾಡು ಒಕ್ಕೂಟದ ಕೇಂದ್ರ ಸಮಿತಿ ಅಧ್ಯಕ್ಷ ಶೈಲೇಶ್ ಆರ್.ಜೆ ಹೇಳಿದರು.
ಅವರು ಅ.30 ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕ್ರಮದಲ್ಲಿ ಐಕಳಭಾವ ಚಿತ್ತರಂನ್ ಶೆಟ್ಟಿ, ನವೀನ್ ಬಿ.ಕೆ, ಸುಕನ್ಯಾ ಪ್ರಭಾಕರ್, ಸಂಜೀವ ಎನ್, ಶೇಖರ್ ಪೂಜಾರಿ ಗೌಂಡತ್ತಿಗೆ, ಪ್ರಶಾಂತ್ ಎಂ ಇವರು ವಿವಿಧ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ನ.1 ತುಳುನಾಡು ವಿಭಾಗವಾದ ದಿನವಾಗಿದ್ದು, ಈ ದಿನ ತುಳುವರಿಗೆ ದುಃಖದ ದಿನವಾಗಿದೆ. ತುಳುವರಲ್ಲಿ ಜಾಗೃತಿ ಮತ್ತು ಸಂಘಟನೆಗಾಗಿ ಈ ಹಿಂದಿನ ವರ್ಷಗಳಲ್ಲಿ ಅಲ್ಲಲ್ಲಿ ಈ ದಿನದಂದು ತುಳು ಧ್ವಜವನ್ನು ಹಾರಿಸುವ ಮೂಲಕ ನಮ್ಮ ನೋವನ್ನು ವ್ಯಕ್ತಪಡಿಸಿದ್ದೇವು ಎಂದರು.
ಈಗಾಗಲೇ ಸೋಸಿಯಲ್ ಮೀಡಿಯಗಳಲ್ಲಿ ನ.1 ತುಳುವರಿಗೆ ಕಪ್ಪು ದಿನ ಎಂಬ ಅಭಿಯಾನ ನಡೆಯುತ್ತಿದೆ. ತುಳುವರಲ್ಲಿ ಜಾಗೃತಿ ಮೂಡುತ್ತಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರಾದ ಪ್ರಶಾಂತ್, ರಾಜು ಬಿ.ಹೆಚ್, ಸುರೇಂದ್ರ ಕೋಟ್ಯಾನ್, ರಾಜೇಶ್ ಕುಲಾಲ್ ಅಳದಂಗಡಿ, ನವೀನ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.