ಕೊಕ್ಕಡ: ಮೃಣ್ಮಯ ಗಣಪತಿ ಟ್ರೋಪಿ ಮುಕ್ತ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

Advt_NewsUnder_1
Advt_NewsUnder_1

ಕೊಕ್ಕಡದ ಮೃಣ್ಮಯ ಗಣೇಶ ಆರಾಧನಾ ಸಮಿತಿ ಹೂವಿನ ಕೊಪ್ಪಲ ಇವರ ಸಂಯೋಜನೆಯಲ್ಲಿ ಹೂವಿನ ಕೊಪ್ಪಲದ ಮೈದಾನದಲ್ಲಿ ಮೃಣ್ಮಯ ಗಣಪತಿ ಟ್ರೋಪಿ ಮುಕ್ತ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಅ.28 ರಂದು ನಡೆಯಿತು.
ಸಮಿತಿಯ ಸಂಚಾಲಕ ಸತ್ಯನಾರಾಯಣ ಭಟ್ ರವರು ದೀಪ ಬೆಳಗಿಸುವ ಮೂಲಕ ಪಂದ್ಯಾಟವನ್ನು ಉದ್ಘಾಟಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕೊಕ್ಕಡ ಡಾ|ಶ್ರೀಹರಿ ರಮಣ ಕ್ಲಿನಿಕ್, ಮೃಣ್ಮಯ ಗಣೇಶ ಆರಾಧನಾ ಸಮಿತಿ ಸಂಚಾಲಕ  ಸತ್ಯನಾರಾಯಣ ಭಟ್, ಮುಖ್ಯಅತಿಥಿಗಳಾಗಿ ಸೌತಡ್ಕ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಅಣ್ಣಪ್ಪ ಗೌಡ ಕಾಶಿ ಉಪಸ್ಥಿತರಿದ್ದರು.

ಸಮಿತಿಯ ಅಧ್ಯಕ್ಷ ಗಣೇಶ್.ಕೆ ಅಧ್ಯಕ್ಷತೆ ವಹಿಸಿದ್ದರು. ಪಂದ್ಯಾಟದಲ್ಲಿ ಪಟ್ರಮೆ ತಂಡದ ಶ್ರೀನಿವಾಸ್ ಮತ್ತು ದೀಪು ಪ್ರಥಮ, ಸಂಗಮ್ ಕೊಕ್ಕಡ ಎ ತಂಡದ ರಶೀದ್ ಮತ್ತು ಅಲ್ತಾಫ್ ದ್ವಿತೀಯ, ಓಣಿತ್ತಾರು ಬಿ ತಂಡದ ಸಂದೇಶ್ ಮತ್ತು ರಂಜೀತ್ ತೃತೀಯ, ಕೊಪ್ಪಲ ಬಿ ತಂಡದ ಗಣೇಶ್ ಮತ್ತು ಭಾರ್ಗವ್ ಚತುರ್ಥ ಸ್ಥಾನವನ್ನು ಪಡೆದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.