ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ ವಿತರಣಾ ಸಮಾರಂಭ

ಉಜಿರೆ: ಶ್ರೀ.ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಉಜಿರೆ ಇಲ್ಲಿನ 2012-13 ನೇ ಸಾಲಿನ ವಿದ್ಯಾರ್ಥಿನಿಯರಿಗೆ “ಎನ್.ಟಿ.ಸಿ” ಪ್ರಮಾಣ ಪತ್ರ ಹಾಗೂ  ಪ.ಜಾತಿ, ಪ.ಪಂಗಡದ ವಿದ್ಯಾರ್ಥಿಗಳಿಗೆ  ” ಲ್ಯಾಪ್‌ಟಾಪ್  ವಿತರಣಾ ಕಾರ್‍ಯಕ್ರಮವು ಉಜಿರೆ ಎಸ್ ಡಿ ಎಂ ಮಹಿಳಾ ಐ.ಟಿ.ಐ ಮಂಜುಶ್ರೀ ಕಟ್ಟಡದಲ್ಲಿ ಅ.25 ರಂದು ನಡೆಯಿತು

ಕಾರ್ಯಕ್ರಮವನ್ನು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ಜನಪ್ರತಿನಿಧಿಯಾದವರು ಜನರ ಸೇವಕನಾಗಿ ಕೆಲಸ ಮಾಡಿದರೆ ಆ ಗ್ರಾಮ, ರಾಜ್ಯ , ದೇಶ ಅಭಿವೃದ್ಧಿಯಾಗುತ್ತದೆ ಎಂಬ ಆದರ್ಶವನ್ನು ಪ್ರತಿಪಾಲಿಸಿ ಬಂದಿರುವ ಗೌರವಾನ್ವಿತ ಪ್ರಧಾನ ಮಂತ್ರಿಯವರ ” ಭೇಟಿ ಬಚಾವೋ ಭೇಟಿ ಪಡಾವೋ” ದ್ಯೇತ್ಯ ವಾಕ್ಯ ಇಲ್ಲಿ ಪೂಜ್ಯ ಖಾವಂದರ ಹಾಗೂ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರಿಂದ ಸಾಕಾರಗೊಂಡಿದೆ. ಮಹಿಳೆ ಸ್ವಾವಲಂಬಿಯಾಗಿ ಬದುಕಲು ಶ್ರೀ.ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಪ್ರೇರಣೆ ನೀಡುತ್ತಿರುವುದು ಸಂಸ್ಥೆಯ ಕಾರ್‍ಯ ವೈಖರ್‍ಯದಿಂದ ತಿಳಿದು ಬಂದಿದೆ  ಎಂದರು.

 ಇನ್ನೋರ್ವ ಮುಖ್ಯ ಅತಿಥಿ ಬೆಳ್ತಂಗಡಿ  ತಾ.ಪಂ ಕಾರ್‍ಯ ನಿರ್ವಹಣಾಧಿಕಾರಿ ಕುಸುಮಾಧರ.ಬಿ ಇವರು “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಹಾಗೂ ಮನೆಯೊಂದು ಬೆಳಗಿದಂತೆ ಎಂದು ಹೇಳಿ ಸರ್ಕಾರದಿಂದ ಹೆಣ್ಣು ಮಕ್ಕಳಿಗೆ ಸಿಗುವ ಬೇರೆ ಬೇರೆ ಸವಲತ್ತುಗಳ ಬಗ್ಗೆ , ಶಿಕ್ಷಣಗಳ ಬಗ್ಗೆ ಸಾಮಾನ್ಯವಾದ ಮಾಹಿತಿಯನ್ನು ನೀಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ. ಧ.ಮಂ. ಶಿಕ್ಷಣ ಸಂಸ್ಥೆಯ ಕಾರ್‍ಯ ನಿರ್ವಹಣಾಧಿಕಾರಿ ಕೆ. ಶಶಿಧರ ಶೆಟ್ಟಿ ಮಾತನಾಡಿ, ಸಾಧನದ ಕೊರತೆಯಿಂದ ಸಾಧನೆಗೆ ಅಡ್ಡಿಯಾಗಬಾರದು ಎಂಬುದು ನಮ್ಮ ಶಿಕ್ಷಣ ಸಂಸ್ಥೆಯ ಗುರಿ. ಅದಕ್ಕಾಗಿ ನಮ್ಮೆಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲಾ ಸೌಲಭ್ಯಗಳನ್ನು ಒದಗಿಸಿರುತ್ತೇವೆ. ಇಂಗ್ಲೀಷ್ ನಲ್ಲಿ ಒಂದು ಮಾತಿದೆ – “A Success full learner is only a good earner” The difference between learner and earner is only ‘L’ which is called Licence” ಅದನ್ನು ನಾವು ಇಂದು ಈ ಸಮಾರಂಭದಲ್ಲಿ ನೀಡುತ್ತಿದ್ದೇವೆ ಎಂದು ಹೇಳಿ ಶುಭ ಹಾರೈಸಿದರು.

ಸಂಸ್ಥೆಯ ಪ್ರಾಂಶುಪಾಲರು ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಕಿರಿಯ ತರಬೇತಿ ಅಧಿಕಾರಿ ಕು| ನಯನಾ ಅವರು ಧನ್ಯವಾದ ನೀಡಿದರೆ, ವಿದ್ಯಾರ್ಥಿನಿಯಾದ ಧನ್ಯಶ್ರೀ ಪಿ ಶೆಟ್ಟಿ ಇವರು ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.