ಧರ್ಮಸ್ಥಳದಲ್ಲಿ ಕೇಂದ್ರ ರಕ್ಷಣಾ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್

ಧರ್ಮಸ್ಥಳ: ಕೇಂದ್ರ ಸರ್ಕಾರದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್  ರವರು ಇಂದು(ಅ.29) ಶ್ರೀ ಕ್ಷೇತ್ರ  ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು. ಅಲ್ಲಿಂದ ಸನ್ನಿಧಿಗೆ ತೆರಳಿ ಬಳಿಕ ಅಮೃತವರ್ಷಿಣಿಯಲ್ಲಿ ಆಯೋಜನೆಗೊಂಡ “ಪ್ರಗತಿ ರಕ್ಷಾ ಕವಚ” ಚಾಲನೆ   ಕಾರ್ಯಕ್ರಮಕ್ಕೆ ತೆರಳಿದರು.
ಕ್ಷೇತ್ರದ ವತಿಯಿಂದ ಡಿ.ಸುರೇಂದ್ರ ಕುಮಾರ್ (ಹೆಗ್ಗಡೆ ಸಹೋದರ)ಅವರನ್ನು ಗೌರವಾದರಗಳಿಂದ ಬರಮಾಡಿಕೊಂಡರು.  ಸಂಸದ  ನಳಿನ್ ಕುಮಾರ್,  ಶಾಸಕ ಹರೀಶ್ ಪೂಂಜ, ವೀರು ಶೆಟ್ಟಿ, ತಹಶೀಲ್ದಾರ್ ಮದನ್‌ಮೋಹನ್ , ಬಿಜೆಪಿ ವಿಭಾಗೀಯ ಪ್ರಭಾರಿ ಪ್ರತಾಪಸಿಂಹ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.