ಪುಂಜಾಲಕಟ್ಟೆ ಉಚಿತ ನೇತ್ರ ಚಿಕಿತ್ಸಾ ಶಿಬಿರ

ಪುಂಜಾಲಟ್ಟೆ: ಇಲ್ಲಿಯ ಶ್ರೀ ಮುರುಗೇಂದ್ರ ಮಿತ್ರ ಮಂಡಳಿ ಮತ್ತು ಶ್ರೀ ಮುರುಗೇಂದ್ರ ವನಿತಾ ಸಮಾಜ ಇದರ ನೇತೃತ್ವದಲ್ಲಿ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಕ್ಕಳ ವಿಭಾಗ ಇದರ ಸಹಭಾಗಿತ್ವದಲ್ಲಿ ಕೆ.ಎಂ.ಸಿ ಮತ್ತು ಅಂಧತ್ವ ನಿಯಂತ್ರಣ ಸಂಸ್ಥೆ ಮಂಗಳೂರು ಇದರ ತಜ್ಞ ವೈದ್ಯರಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರವು ಇತ್ತೀಚೆಗೆ ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಸಭಾಭವನದಲ್ಲಿ ಜರುಗಿತು.
ಪ್ರಗತಿಪರ ಕೃಷಿಕ ಶ್ರೀಧರ ಶೆಟ್ಟಿ ಭಂಡಾರಬೆಟ್ಟು ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದರು. ಪಿಲಾತಬೆಟ್ಟು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕುಮಂಗಿಲ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ಅಂಧತ್ವ ನಿಯಂತ್ರಣ ಸಂಸ್ಥೆಯ ಹಿರಿಯ ನೇತ್ರಾಧಿಕಾರಿ ಡಾ| ಸವಿತಾ. ಪಿ ಕುಲಕರ್ಣಿ, ನೇತ್ರ ವೈದ್ಯೆ ಡಾ| ತ್ರಿಶಾ, ನೇತ್ರ ಪರಿವೀಕ್ಷಕ ಕೆ.ವಿ ಶ್ರೀಧರನ್, ಶ್ರೀ ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆಯ ಮಡಂತ್ಯಾರು ವಲಯ ಮೇಲ್ವಿಚಾರಕ ಸಚಿನ್, ವನಿತಾ ಸಮಾಜದ ಅಧ್ಯಕ್ಷೆ ಆಶಾ ದಿನಕರ ಶೆಟ್ಟಿ, ಸದಸ್ಯೆ ಬಬಿತಾ ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.
ಮಿತ್ರ ಮಂಡಳಿ ಅಧ್ಯಕ್ಷ ಉದಯ್ ಕುಮರ್ ಶೆಟ್ಟಿ ಪ್ರಸ್ತಾವಿಸಿ, ಸ್ವಾಗತಿಸಿದರು. ವನಿತಾ ಸಮಾಜದ ಸದಸ್ಯೆ ವಿಜಯಾ ವಂದಿಸಿ, ಸಂಘದ ಸದಸ್ಯ ಕೆ.ವಿ ರಾಜೇಂದ್ರ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.