ಪಿಎಫ್‌ಐ ಮಡಂತ್ಯಾರು ವಲಯದಿಂದ “ಜನಾರೋಗ್ಯವೇ ರಾಷ್ಟ್ರ ಶಕ್ತಿ” ಅಭಿಯಾನ

ಮಡಂತ್ಯಾರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ದೇಶದಾದ್ಯಂತ ಹಮ್ಮಿಕೊಂಡ “ಜನಾರೋಗ್ಯವೇ ರಾಷ್ಟ್ರ ಶಕ್ತಿ” ಅಭಿಯಾನ ಅಂಗವಾಗಿ ಸಂಘಟನೆಯ ಮಡಂತ್ಯಾರು ವಲಯದ ವತಿಯಿಂದ ಮ್ಯಾರಾಥಾನ್ ಓಟ ಹಾಗೂ ಡೆಮೋ ಕಾರ್ಯಕ್ರಮ ಅ. 28 ರಂದು ನಡೆಯಿತು.
ಪುಂಜಾಲಕಟ್ಟೆಯಿಂದ ಮಡಂತ್ಯಾರು ವರೆಗೆ ನಡೆದ ಮ್ಯಾರಾಥಾನ್ ಓಟಕ್ಕೆ ಪಾಪ್ಯುಲರ್ ಫ್ರಂಟ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಇಕ್ಬಾಲ್ ಬಂಗೇರಕಟ್ಟೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ “ಸದೃಢ, ಭಯಮುಕ್ತ ಭಾರತ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ದೈಹಿಕ ಹಾಗೂ ಮಾನಸಿಕವಾಗಿ ಸನ್ನದ್ಧರಾಗಬೇಕೆಂದು” ಕರೆ ನೀಡಿದರು.
ಈ ಸಂದರ್ಭ ಪಿಎಫ್‌ಐ ಮಡಂತ್ಯಾರು ವಲಯ ಅಧ್ಯಕ್ಷರಾದ ನಿಝಾರ್ ಕುದ್ರಡ್ಕ, ಜಿಲ್ಲಾ ಸಮಿತಿ ಸದಸ್ಯರಾದ ಲತೀಫ್ ಪುಂಜಾಲಕಟ್ಟೆ,SDPI ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಟಿ.ಎಸ್ ಹನೀಫ್ ಮುಂತಾದವರು ಉಪಸ್ಥಿತರಿದ್ದರು.
ಪಿಎಫ್‌ಐ ಮಡಂತ್ಯಾರು ವಲಯ ಕಾರ್ಯದರ್ಶಿ ತ್ವಾಹಿರ್ ಇಂಜಿನಿಯರ್ ಕಾರ್ಯಕ್ರಮವನ್ನು ಸ್ವಾಗತಿಸಿದರು ,ಶಾಕಿರ್ ಹಾಗೂ ಇಮ್ರಾನ್ ನಿರೂಪಣೆಗೈದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.