ಮಕ್ಕಳ ರಕ್ಷಣೆಯ ಹಕ್ಕು ಮಾಹಿತಿ ಕಾರ್ಯಗಾರ

ಬೆಳ್ತಂಗಡಿ: ಕಪುಚಿನ್ ಕೃಷಿಕ್ ಸೇವಾ ಕೇಂದ್ರ ವಿಮುಕ್ತಿ ಲಾಯಿಲ ಹಾಗೂ ಚೈಲ್ಡ್ ಫಂಡ್ ಇಂಡಿಯಾ ಇದರ ವತಿಯಿಂದ ಮಕ್ಕಳ ರಕ್ಷಣೆಯ ಹಕ್ಕು ಕುರಿತು ಮಾಹಿತಿ ಕಾರ್ಯಗಾರವು ವಿಮುಕ್ತಿ ಕಛೇರಿಯಲ್ಲಿ ನಡೆಯಿತು. ಚೈಲ್ಡ್ ಫಂಡ್‌ನ ಶಿಕ್ಷಣ ಸಂಯೋಜಕಿ ಕು.ಎಮಿಲ್ಡಾ ಇವರು ಮಕ್ಕಳಿಗೆ ಪ್ರಸ್ತುತ ಸಮಾಜದಲ್ಲಿ ಆಗುತ್ತಿರುವ ಅನ್ಯಾಯದ ಕುರಿತು ತಿಳಿಸುತ್ತಾ, ಮಕ್ಕಳ ರಕ್ಷಣಾ ಕಾಯ್ದೆಯಲ್ಲಿ ಬರುವಂತಹ ಮಕ್ಕಳ ರಕ್ಷಣೆಯ ಹಕ್ಕು, ರಕ್ಷಣೆಯ ಅಗತ್ಯತೆ , ರಕ್ಷಣೆ ಕಾರ್ಯದಲ್ಲಿ ಬರುವ ಅಂಶಗಳ ಬಗ್ಗೆ ಮಾಹಿತಿ ಹಾಗೂ ಮಕ್ಕಳ ಕಳ್ಳಸಾಗಾಣಿಕೆ, ಬಾಲ ಕಾರ್ಮಿಕತೆ, ಕೆಟ್ಟ ಹಾಗೂ ಒಳ್ಳೆಯ ಸ್ಪರ್ಶಗಳ ಕುರಿತ ಕಿರು ಚಿತ್ರಗಳ ಮೂಲಕ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕೊಯ್ಯೂರು ಮಲೆಬೆಟ್ಟು ಸಮುದಾಯದ 30 ಮಕ್ಕಳು ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು. ಶ್ರೀಮತಿ ಸವಿತಾ  ಸ್ವಾಗತಿಸಿ,  ಅಶೋಕ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.