ಉಣ್ಣಿಕೃಷ್ಣನ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ರೌಡಿ ಅನಾಸ್ ಬಂಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಉಣ್ಣಿಕೃಷ್ಣನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯದ ಪ್ರಧಾನ ಸೂತ್ರಧಾರಿ ಕೇರಳದ ಕುಖ್ಯಾತ ರೌಡಿ ಅನಾಸ್ ಎಂಬವರ ಅಡಗುದಾಣ ಪತ್ತೆಹಚ್ಚಿದ ಉಪ್ಪಿನಂಗಡಿ ಪೊಲೀಸರು ಅ.25 ರಂದು ಆತನನ್ನು ಬಂಧಿಸಿದ್ದಾರೆ.
ಅನಾಸ್ ರವರನ್ನು ಕೇರಳದ ಕೊಚ್ಚಿ ಕಾಕನಾಡ್ ಐಷರಾಮಿ ಫ್ಲ್ಯಾಟೊಂದರಲ್ಲಿ ಪತ್ತೆಹಚ್ಚಿದ ಉಪ್ಪಿನಂಗಡಿ ಎಸ್‌ಐ ನಂದಕುಮಾರ್ ನೃತೃತ್ವದ ಪೊಲೀಸ್ ತಂಡ, ಕೇರಳ ಪೊಲೀಸರ ನೆರವಿನೊಂದಿಗೆ ಬಂಧಿಸಿದ್ದಾರೆ.
ಭೂಗತ ದೊರೆಯಂತೆ ಮೆರೆಯುವ ಅನಾಸ್‌ರವರ ಗ್ಯಾಂಗ್‌ನಲ್ಲಿ 450 ರಿಂದ 50 ರಷ್ಟು ಸದಸ್ಯರಿದ್ದು, ಕೇರಳ ಸೇರಿದಂತೆ ದ.ಕ ಜಿಲ್ಲೆಗೂ ಈ ರೌಡಿ ಗ್ಯಾಂಗ್‌ನ ಜಾಲ ವ್ಯಾಪಿಸಿದೆ. ಚಿನ್ನದ ಬಿಸ್ಕೆಟ್ ಕಳ್ಳ ಸಾಗಾಟ, ಕಿಡ್ನಾಪ್, ಜಾಗದ ಡೀಲಿಂಗ್ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಈತ ಎರ್ನಾಕುಲಂ ನಿವಾಸಿಯಾಗಿದ್ದು, ಕೊಚ್ಚಿಯಲ್ಲಿರುವ 18 ಮಹಡಿಯ ಫ್ಲ್ಯಾಟೊಂದರ ಕೊನೆಯ ಮಹಡಿಯಲ್ಲಿ ತಲೆಮರೆಸಿಕೊಂಡಿದ್ದನು.
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಅನಾಸ್‌ರವರ ಸಹಚರರಾದ ಕಂಬಿನಿಪ್ಪಡಿ ಕೊಟ್ಟಕ್ಕಾಕತ್ ಮನೆಯ ಔರಂಗಜೇಬ್, ಪಾಲಕ್ಕಾಡು ಜಿಲ್ಲೆ ಅಲೆತ್ತೂರು ತಾಲೂಕಿನ ಚುಂದಕಾಡು ಕಾವಶ್ಯೇರಿ ಗ್ರಾಮದ ಕೊಕ್ರತ್ತಲ್ ನಿವಾಸಿ ಮಹಮ್ಮದ್ ಶಮನಾಝ್, ಎರ್ನಾಕುಲಂ ಜಿಲ್ಲೆ ಫಲ್ಲಿತ್ತಾಯ ತಾಲೂಕಿನ ಎಲಿಯಟೈಲ್ ಮನೆಯ ಜೀತು ಸಾಜಿ, ಎರ್ನಾಕುಲಂ ಜಿಲ್ಲೆ ತಾಯಕಟ್ಟಕೆರೆ ತಾಲೂಕಿನ ಕುಂಗತ್ತಿ ಪರಂಬಿಲ್ ಸುಹೈಲ್ ನಝರ್ ಇವರುಗಳನ್ನು ಬಂಧಿಸಲಾಗಿದೆ. ಭೂಗತ ಚಟುವಟಿಕೆಯಲ್ಲಿ ತನ್ನನ್ನು ಮೀರಿ ಬೆಳೆಯುತ್ತಿರುವ ಉಣ್ಣಿಕೃಷ್ಣನ್ ಬಗ್ಗೆ ಭೀತಿ ಹೊಂದಿದ್ದ ಅನಾಸ್, ತನ್ನ ಇತರ ಸಹಚರರ ಸಹಕಾರದಿಂದ ಆತನನ್ನು ಕೊಲೆಗೈದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.