ಪಲಾರಗೋಳಿ ದೈವ ಕೊಡಮಣಿತ್ತಾಯ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿ ಶಿಲಾನ್ಯಾಸ ಸಮಾರಂಭ

ಮರೋಡಿ : ಪ್ರತಿ ಊರಿನಲ್ಲಿ ದೈವ-ದೇವರ ಕಟ್ಟುಕಟ್ಟಲೆ ಯ ಕೆಲಸಗಳು ಸುಸೂತ್ರವಾಗಿ ನಡೆದು ಪ್ರತಿಯೊಬ್ಬರೂ ಬದುಕಿನಲ್ಲಿ ಶಾಂತಿ-ನೆಮ್ಮದಿಯ ಜೀವನ ಸಾಗಿಸಬೇಕಾದರೆ ದೈವ-ದೇವರನ್ನು ಭಕ್ತಿಯಿಂದ ಪೂಜಿಸಿದರೆ ಊರು ಬೆಳಗುವುದರೊಂದಿಗೆ ನಮ್ಮ ಮನೆ-ಮನಸ್ಸುಗಳು ಬೆಳಗುತ್ತದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಭಿಪ್ರಾಯಪಟ್ಟರು.
ಅವರು ಅ.22 ರಂದು ಮರೋಡಿಯಲ್ಲಿ ತಾಳಿಪಾಡಿ-ಪಲಾರಗೋಳಿ ದೈವ ಕೊಡಮಣಿತ್ತಾಯ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿ ಇದರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಶ್ರೀ.ಗು.ನಾ.ಸ್ವಾ.ಸೇ.ಸಂಘದ ಮಾಜಿ ಅಧ್ಯಕ್ಷ ಕಾಶಿಪಟ್ನ ಮಿತ್ತೊಟ್ಟುಗುತ್ತು ಪಿ.ಕೆ ರಾಜು ಪೂಜಾರಿ ನೆರವೇರಿಸಿ ಮಾತನಾಡಿ ನಾವು ಹಿಂದುಗಳು, ನಾವು ದೈವ-ದೇವರ ಕೆಲಸ ಮಾಡುವಾಗ ನಮ್ಮಲ್ಲಿ ಜಾತಿ-ಮತ, ಶ್ರೀಮಂತ, ಬಡವ ಎಂಬ ಭೇದ ಭಾವ ಮಾಡದೇ ನಾವೆಲ್ಲರೂ ಸಮಾನತೆಯಿಂದ ಬದುಕಬೇಕು ಎಂದರು.
ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ಬಿಜೆಪಿ ಮಂಡಲ ಉಪಾಧ್ಯಕ್ಷ ಜಯಂತ್ ಕೋಟ್ಯಾನ್ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿ ಗೌರವ ಅಧ್ಯಕ್ಷ ನೇಮಿರಾಜ ಪಾಂಡಿ, ಗುಡ್ಡನ್‌ಬೆಟ್ಟುಗುತ್ತು ವಹಿಸಿದ್ದರು.
ವೇದಿಕೆಯಲ್ಲಿ ಸುರತ್ಕಲ್ ತುಳುನಾಡ ಬಿರುವೆರ್ ಇದರ ಸ್ಥಾಪಕ ಅಧ್ಯಕ್ಷ ಲೋಕೇಶ್ ಕೋಡಿಕೆರೆ, ಪಲಾರಗೋಳಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ರತ್ನಾಕರ ಬುಣ್ಣನ್ ಮರೋಡಿ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ದಾಮೋದರ ಪೂಜಾರಿ, ಬೆಳ್ತಂಗಡಿ ಶ್ರೀ.ಗು.ನಾ.ಸ್ವಾ.ಸೇ.ಸಂಘದ ನಿರ್ದೇಶಕ ಸಂತೋಷ್.ಪಿ,ಕೋಟ್ಯಾನ್ ಬಳಂಜ, ಮರೋಡಿ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ವಿಜಯ ಅರಿಗ, ಮಾಗಣೆ ಗುರಿಕಾರರು, ಅಶೋಕ್ ಕೋಟ್ಯಾನ್ ಪಡ್ಯೋಡಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರಾಮ್‌ಪ್ರಸಾದ್ ಮರೋಡಿ ಉಪಸ್ಥಿತರಿದ್ದರು. ಲೋಲಾಕ್ಷಿ, ಯಶೋಧ, ಶೋಭಾ ಪ್ರಾರ್ಥನೆ ಹಾಡಿದರು. ಸಮಿತಿ ಗೌರವಾಧ್ಯಕ್ಷ ನೇಮಿರಾಜ ಪಾಂಡಿ ಸ್ವಾಗತಿಸಿದರು. ಸತೀಶ್ ಹೊಸ್ಮಾರು ಕಾರ್ಯಕ್ರಮ ನಿರೂಪಿಸಿ, ಸಮಿತಿ ಅಧ್ಯಕ್ಷ ರಾಮ್‌ಪ್ರಸಾದ್ ಮರೋಡಿ ವಂದಿಸಿದರು.

ಡಾ| ಪದ್ಮಪ್ರಸಾದ್ ಅಜಿಲರಿಂದ ಶಿಲಾನ್ಯಾಸ
ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ದೈವಕೊಡಮಣಿತ್ತಾಯ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿ ತಾಳಿಪಾಡಿ-ಪಲಾರಗೋಳಿ ಗರಡಿಗೆ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು ಶಿಲಾನ್ಯಾಸ ನೆರವೇರಿಸಿ ಶುಭಕೋರಿದರು. ಕೇಳಬೊಟ್ಟ ಶ್ರೀ ಅನಂತ ಅಸ್ರಣ್ಣರು ವೈದಿಕ-ವಿಧಿ-ವಿಧಾನ ನೆರವೇರಿಸಿದರು.
ಈ ಸಂದರ್ಭದಲ್ಲಿ ಮರೋಡಿ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಪ್ರಮುಖರಾದ ದಿನಕರ ಬಂಗೇರ, ಸಂದೀಪ್ ಶೆಟ್ಟಿ, ಜಾರಪ್ಪ ಪೂಜಾರಿ ಕುಮೇರು, ವೀರಪ್ಪ ಸಾಲಿಯಾನ್, ಗಂಗಯ್ಯ ಪೂಜಾರಿ, ಅಣ್ಣಿ ಪೂಜಾರಿ ಕಲ್ಲಟ, ಶ್ರೀಧರ ಪೂಜಾರಿ, ವಿನೋಧರ ಸಾಲಿಯಾನ್, ಬಾಬು ಸಾಲಿಯಾನ್, ಸಿದ್ದಪ್ಪ ಪೂಜಾರಿ ಹಚ್ಚಾಡಿ, ಶುಭಕರ ಅಸತ್ತೆ, ದೈವಪಾತ್ರಿ ಜಯ ಮತ್ತು ಜಯಾನಂದ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.