ಧರ್ಮಸ್ಥಳ ಪದ್ಮ ಕ್ಲಿನಿಕ್ ವೈದ್ಯ ಡಾ| ಎಂ.ಆರ್. ಭಟ್ ನಿಧನ

ಉಜಿರೆ : ಮೂಲತಃ ತೆಂಕಕಜೆಕಾರು ಗ್ರಾಮದ ಮಡವು ಡಾ| ಎಂ.ಆರ್.ಭಟ್ (ರಘುರಾಮ್) (56.ವ) ರವರು ಉಜಿರೆ ಸಂಪಿಗೆ ನಗರದ ಸ್ವಗೃಹದಲ್ಲಿ ಅ.23 ರಂದು ಪೂರ್ವಾಹ್ನ ದೇವರಿಗೆ ಪೂಜೆ ಮಾಡುತ್ತಿರುವ ಸಂದರ್ಭದಲ್ಲಿ  ಹೃದಯಾ ಘಾತದಿಂದ ಕುಸಿದು ಬಿದ್ದು ನಿಧನರಾದರು.
ಅವರು ಕಳೆದ ಸುಮಾರು 25 ವರ್ಷಗಳಿಂದ ಧರ್ಮಸ್ಥಳದಲ್ಲಿ ಪದ್ಮ ಕ್ಲಿನಿಕ್ ನಲ್ಲಿ ವೈದ್ಯಕೀಯ ಸೇವೆ ಪ್ರಾರಂಭಿಸಿ, ಎಲ್ಲರಿಂದಲೂ ರಘು ಡಾಕ್ಟರ್ ಎಂದೇ ಕರೆಯಲ್ಪಡುತ್ತಿದ್ದರು.
ಮೃತರ ಪತ್ನಿ ಸುಮಾ ಭಟ್, ಪುತ್ರ ಧಾರವಾಡದಲ್ಲಿ ವೈದ್ಯಕೀಯ ವ್ಯಾಸಂಗ ನಡೆಸುತ್ತಿರುವ ಆದಿತ್ಯ.ಎಂ, ಪುತ್ರಿ ಅನನ್ಯ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವನ್ನು ಮಡವು ಮೂಲ ಮನೆಯಲ್ಲಿ ನೆರವೇರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.