HomePage_Banner_
HomePage_Banner_

ಉಚ್ಚಾಟನೆಯ ಬಗ್ಗೆ ಅಧಿಕೃತ ಪತ್ರ ಕಾಂಗ್ರೆಸ್‌ನಿಂದ ಬಂದಿಲ್ಲ : ಜನಾರ್ದನ ಬಂಗೇರ

ಬೆಳ್ತಂಗಡಿ : ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಯ ಬಗ್ಗೆ ಅಧಿಕೃತ ಪತ್ರ ನನಗೆ ಬರಲಿಲ. ಮಾಧ್ಯಮದಿಂದ ತಿಳಿದು ಗೊತ್ತಾಯಿತು. ಬೆಳ್ತಂಗಡಿ ನಗರ ಪಂಚಾಯತ್ 8ನೇ ವಾರ್ಡ್‌ನಲ್ಲಿ ಹುಟ್ಟಿ ಬೆಳೆದ ನನಗೆ ಕಾಂಗ್ರೆಸ್ ಪಕ್ಷದಿಂದ ಅವಕಾಶ ಕೊಡದೇ, ವಲಸೆ ಬಂದವರಿಗೆ ಸ್ಪರ್ಧಿಸಲು ಅವಕಾಶ ನೀಡಿರುವುದರಿಂದ ಈ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಜನಾರ್ಧನ ಬಂಗೇರ ಮೂಡಾಯಿಗುತ್ತು ಹೇಳಿದರು. ಅವರು ಅ. 24 ರಂದು ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನನ್ನ ನಾಯಕ ಮಾಜಿ ಶಾಸಕ ವಸಂತ ಬಂಗೇರ ರವರ ಜೊತೆಗೆ 1983 ರಿಂದ ಸೋಲು ಗೆಲುವುಗಳ ಸಂದರ್ಭ ಜೊತೆಗಿದ್ದೇನೆ. ಇನ್ನು ಮುಂದೆಯೂ ಅವರ ಜೊತೆಗೆ ಇರುತ್ತೇನೆ. ನಾನು ಯಾವುದೇ ಪಕ್ಷ ವಿರೋಧ ಚಟುವಟಿಕೆ ಮಾಡಲಿಲ್ಲ. ನನ್ನನ್ನು ಹೇಗೆ ಉಚ್ಚಾಟನೆ ಮಾಡಿದ್ದಾರೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬೆಳ್ತಂಗಡಿ ಬ್ಲಾಕ್ ನಗರ ಅಧ್ಯಕ್ಷರು ಪಕ್ಷ ವಿರೋಧ ಚಟುವಟಿಕೆ ಮಾಡಿದ ಬಗ್ಗೆ ನನ್ನಲ್ಲಿ ದಾಖಲೆ ಇದೆ. ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡುತ್ತೇನೆ ಎಂದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.