ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿ ಆಚರಣೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕರ್ನಾಟಕ ಸರಕಾರ ತಾಲೂಕು ಆಡಳಿತ ಬೆಳ್ತಂಗಡಿ ಇದರ ವತಿಯಿಂದ ಮಹರ್ಷಿ ಶ್ರೀ ವಾಲ್ಮೀಕಿಯವರ ಜಯಂತಿ ಆಚರಣೆಯನ್ನು ಅ.24 ರಂದು ತಾ.ಪಂ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಕುಸುಮಧರ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ವಾಲ್ಮೀಕಿ ಆದಿಕವಿಯಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ರತ್ನಾಕರ ಎಂಬ ಹೆಸರನ್ನು ಹೊಂದಿದ್ದ ಇವರು ತಪ್ಪಸ್ಸು ಆಚರಿಸಿ ಬೆಳೆದ ಹುತ್ತದಿಂದ ಹೊರ ಬಂದುದರಿಂದ ವಾಲ್ಮೀಕಿ ಎಂಬ ಹೆಸರು ಬಂತು. ಇವರ ಜೀವನ ಸಂದೇಶಗಳು ನಮಗೆ ಆದರ್ಶವಾಗಿದೆ ಎಂದರು.
ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಹ ಶಿಕ್ಷಕ ಅರವಿಂದ ಚೊಕ್ಕಾಡಿಯವರು ವಾಲ್ಮೀಕಿಯವರ ಜೀವನ ಚರಿತ್ರೆಯ ಬಗ್ಗೆ ಸಮಗ್ರ ಮಾಹಿತಿ ನೀಡಿ, ೫೦೦ ವರ್ಷಗಳ ಹಿಂದೆ ವೃತ್ತಿ ಆಧಾರಿಸಿ ಜಾತಿ ಸೂಚಿತವಾಗುತ್ತಿತ್ತು. ವಾಲ್ಮೀಕಿ ಬ್ರಾಹ್ಮಣನಾದರೂ, ಬೇಟೆಯಾಡುತ್ತಿದ್ದುದರಿಂದ ಬೇಡರ ಜಾತಿ ಎಂದು ಕರೆಯಲಾಯಿತು. ನಾರದರಿಂದ ಪರಿವರ್ತನೆಗೊಂಡು, ಹತ್ತದಿಂದ ಹೊರ ಬಂದದ್ದರಿಂದ ವಾಲ್ಮೀಕಿಯಾಗಿ, ರಾಮಾಯಣ ಮಹಾ ಕಾವ್ಯ ರಚಿಸುವುದರ ಮೂಲಕ ಶೋಕ ತಪ್ತರಾದವರಿಗೆ ಸ್ಪಂದಿಸುವ ಕೆಲಸ ಮಾಡಿದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಮುರಳೀಧರ ವಹಿಸಿದ್ದರು. ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪಬ್ಲೀಕ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಾದ ಗಣೇಶ್ ಬೆಳ್ತಂಗಡಿ, ಮಂಜುನಾಥ ಮುಂಡಾಜೆ, ಶ್ವೇತಾ ಎಂ.ಎಸ್ ಮುಂಡಾಜೆ, ಲಿಖಿತಾ ಅಳದಂಗಡಿ ಮತ್ತು ದುರ್ಶನ್ ಉಜಿರೆ ಇವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಮೇಲ್ವಿಚಾರಕಿ ಹೇಮಲತಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮೇಲ್ವಿಚಾರಕಿ ನಳಿನಿ ಡಿ. ಪಟಗಾರ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.