ಪ.ಪಂ ಚುನಾವಣೆ: ಚುನಾವಣಾಧಿಕಾರಿಗಳಿಂದ ರಾಜಕೀಯ ಪಕ್ಷಗಳಿಗೆ ನೀತಿ ಪಾಠ

ಬೆಳ್ತಂಗಡಿ : ಬೆಳ್ತಂಗಡಿ ನಗರ ಪಂಚಾಯತ್ ಚುನಾವಣೆಗೆ ಸಂಬಂಧಪಟ್ಟಂತೆ ಎಲ್ಲಾ ರಾಜಕೀಯ ಪಕ್ಷಗಳಿಂದಲೂ ಬಿರುಸಿನ ಪ್ರಚಾರ ನಡೆಯುತ್ತಿದ್ದು, ಈ ಮಧ್ಯೆ ಚುನಾವಣೆಯ ಸಂದರ್ಭದಲ್ಲಿ ಯಾವ ನೀತಿ ನಿಯಮಗಳನ್ನು ಪಾಲಿಸಬೇಕು ಎಂಬುವುದರ ಬಗ್ಗೆ ಪ್ರತೀ ರಾಜಕೀಯ ಮುಖಂಡರುಗಳಿಗೆ ಅ.22 ರಂದು ಚುನಾವಣಾಧಿಕಾರಗಳು ವಿವರಿಸಿದರು.
ಅ.28 ರಂದು ಬೆಳಿಗ್ಗೆ 7.00 ರಿಂದ 5.00 ರವರೆಗೆ ಚುನಾವಣೆ ನಡೆಯಲಿದ್ದು, ಮತದಾನ ಮಾಡಿರುವುದಕ್ಕೆ ಎಡಗೈ ಉಂಗುರ ಬೆರಳಿಗೆ ಶಾಯಿ ಹಾಕಲಾಗುತ್ತದೆ. ಚುನಾವಣಾ ಖರ್ಚು ವೆಚ್ಚಗಳನ್ನು ಯಾವ ರೀತಿ ಮಾಡಲಾಗುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ, ಎಸ್‌ಡಿಪಿಐ, ಬಿ.ಎಸ್.ಪಿ, ಜೆಡಿಎಸ್ ಪಕ್ಷಗಳ ಮುಖಂಡರುಗಳು, ಪಕ್ಷೇತರ ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಚುನಾವಣಾ ಲೆಕ್ಕ ಪತ್ರಾಧಿಕಾರಿಯಾಗಿ ಪಂಚಾಯತ್‌ನ ಪ್ರಭಾರ ಮುಖ್ಯಾಧಿಕಾರಿ ವೆಂಕಟರಮಣ ಶರ್ಮ ರವರು ನೇಮಕಗೊಂಡಿದ್ದು, ಪ್ರತಿ ಅಭ್ಯರ್ಥಿಯ ಖರ್ಚು- ವೆಚ್ಚದ ಕುರಿತು ಅವರು ಮಾಹಿತಿ ಸಂಗ್ರಹಿಸಿ ಚುನಾವಣಾಧಕಾರಿಗಳಿಗೆ ನೀಡಬೇಕಾಗುತ್ತದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.