ಮುಂಡಾಜೆ :ಎನ್‌ಎಸ್‌ಎಸ್ ಶಿಬಿರದ ಸಮಾರೋಪ

ಮುಂಡಾಜೆ : ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಮುಂಡಾಜೆ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಅ.20 ರಂದು ನಡೆಯಿತು.
ಮುಂಡಾಜೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶ್ರೀನಿವಾಸ ರಾವ್ ಕಲ್ಮಂಜ ಅಧ್ಯಕ್ಷತೆ ವಹಿಸಿದ್ದರು. ಕಾರ್‍ಯಕ್ರಮದಲ್ಲಿ ಭಾಗವಹಿಸಿದ ವಾಣಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ಡಿ. ಯದುಪತಿ ಗೌಡ ಇವರು ಮಾತನಾಡುತ್ತಾ ಎನ್.ಎಸ್.ಎಸ್ ಎಂಬುದು ವಿದ್ಯಾರ್ಥಿಗಳನ್ನು ಕೌಶಲ್ಯಭರಿತರನ್ನಾಗಿ ಮಾಡಿ, ಆಧುನಿಕ ಶಿಕ್ಷಣದಲ್ಲಿ ಏನು ನಿಜವಾಗಿಯೂ ಅಗತ್ಯವಿದೆಯೋ, ಅದನ್ನು ಸೃಷ್ಟಿಸುವ ಮಹತ್ವ ಕಾರ್‍ಯವನ್ನು ನೆರವೇರಿಸುತ್ತದೆ ಎಂದರು. ವೇದಿಕೆಯಲ್ಲಿ ಕಾಲೇಜಿನ ಸಂಚಾಲಕ ಕೊರಗಪ್ಪ ನಾಯ್ಕ, ಜಿ.ಪಂಸದಸ್ಯೆ ಸೌಮ್ಯಲತಾ, ಕಾಲೇಜಿನ ಪ್ರಾಂಶುಪಾಲ ಜಾಲಿ ಡಿ’ಸೋಜಾ, ಕಡಿರುದ್ಯಾವರ ಮಹಿಳಾ ಮಂಡಲದ ಅಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ, ಶಾಲಾ ಮುಖ್ಯೋಪಾಧ್ಯಾಯ ದಿನೇಶ್ಚಂದ್ರ ಶೆಟ್ಟಿ ಇವರು ಉಪಸ್ಥಿತರಿದ್ದರು.
ಎನ್.ಎಸ್.ಎಸ್ ಅಧಿಕಾರಿ ಪುರುಷೋತ್ತಮ ಶೆಟ್ಟಿ ಅಗರಿ ಶಿಬಿರದ ವರದಿ ವಾಚಿಸಿದರು. ಈ ಸಂದರ್ಭದಲ್ಲಿ ಶಿಬಿರದ ಅಧ್ಯಕ್ಷತೆಯನ್ನು ವಹಿಸಿದ್ದ ಭಾಸ್ಕರ ಆಚಾರಿ ಹಾಗೂ ಎನ್.ಎಸ್.ಎಸ್ ಅಧಿಕಾರಿ ಪುರುಷೋತ್ತಮ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ವಿನಾಯಕ ಪ್ರಭು ಆಲಂದಡ್ಕ, ಪ್ರಭಾಕರ ಶೆಣೈ, ವಿಶ್ವನಾಥ, ಸಂಧ್ಯಾ ಹಾಗೂ ಸಹಕಾರ ನೀಡಿದ ಎಲ್ಲಾ ಊರ ಬಂಧುಗಳಿಗೆ ವಿಶೇಷ ಕೃತಜ್ಞತೆಯನ್ನು ಸಮರ್ಪಿಸಲಾಯಿತು.
ಶಿಬಿರಾರ್ಥಿಗಳು ಪ್ರಾರ್ಥಿಸಿ, ಸಹಶಿಬಿರಾಧಿಕಾರಿ ನವಿತಾ ಕಾರ್ಯಕ್ರಮ ನಿರೂಪಿಸಿ, ಕೃಷ್ಣಕಿರಣ್ ವಂದಿಸಿದರು. ಸಹಶಿಬಿರಾಧಿಕಾರಿಯಾಗಿ ಸಹಕರಿಸಿದ ಕೃಷ್ಣಕಿರಣ್, ನಮಿತಾ, ವಿದ್ಯಾರಾವ್, ಯೋಗೀಶ್ ಇವರಿಗೆ ಅಭಿನಂದಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.