ಹಿಂದೂ ಜನಜಾಗೃತಿ ಸಮಿತಿಯಿಂದ ಕೇಂದ್ರ ಗೃಹಸಚಿವರಿಗೆ ಮನವಿ

ಬೆಳ್ತಂಗಡಿ : ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶದ ವಿಷಯದಲ್ಲಿ ಕೇರಳ ಸರ್ಕಾರವು ಕೂಡಲೇ ಸುಗ್ರಿವಾಜ್ಞೆ ಹೊರಡಿಸಿ ಶಬರಿಮಲೆ ಕ್ಷೇತ್ರದ ಪರಂಪರೆಯ ರಕ್ಷಣೆ ಮಾಡಬೇಕೆಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮಾನ್ಯ ಉಪತಹಶೀಲ್ದಾರರ ಮೂಲಕ ಕೇಂದ್ರ ಗೃಹಮಂತ್ರಿಗಳಿಗೆ ಅ.20 ರಂದು ಮನವಿ ಸಲ್ಲಿಸಲಾಯಿತು.
ಕರ್ನಾಟಕದಲ್ಲಿ ಅನೇಕ ಹಿಂದುತ್ವವಾದಿಗಳ ಹತ್ಯೆಗೆ ಕಾರಣಿಕರ್ತನಾಗಿರುವ ಅಬಿದ್ ಪಾಶಾನ ಬಗ್ಗೆ ಸೂಕ್ತ ತನಿಖೆ ಆಗಬೇಕು, ಕುಂಭಮೇಳದ ಸಂದರ್ಭದಲ್ಲಿ ರೈಲ್ವೆ ದರ ಏರಿಕೆ, ಚರ್ಚ್ ಗಳಲ್ಲಿ ಧರ್ಮಭಗಿನಿಯರ ಮೇಲೆ ಆದ ಲೈಂಗಿಕ ಶೋಷಣೆ ಬಗ್ಗೆ ತನಿಖೆಯಾಗಬೇಕು. ವೇಶ್ಯಾವಾಟಿಕೆ  ನಡೆಸುತ್ತಿರುವ ಜಾಲತಾಣದ ಮೇಲೆ ಪ್ರತಿಬಂಧವನ್ನು ಹೇರುವಂತೆ ಕಾನೂನನ್ನು ರಚಿಸಬೇಕು ಎಂದು ಒತ್ತಾಯಿಸಿ ಮನವಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಜೈ ಶ್ರೀರಾಮ್ ಗೆಳೆಯರ ಬಳಗದ ಅಧ್ಯಕ್ಷರು, ಬಂದಾರು ಗ್ರಾ.ಪಂ ಅಧ್ಯಕ್ಷ, ವಕೀಲ ಉದಯಕುಮಾರ್ ಬಿ‌.ಕೆ,  ಹಿಂದೂ ಜನಜಾಗೃತಿ ಸಮಿತಿಯ ಹರೀಶ್ ಜೆ.ಕೆ., ಕರುಣಾಕರ ಅಭ್ಯಂಕರ್, ಯೋಗೀಶ್ ಅತ್ತಿನಡ್ಕ,  ಶಶಿಧರ್ ಗೌಡ ಮಕಾಳ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.