ಉಜಿರೆ: ಉಚಿತ ನೇತ್ರ ತಪಾಸಣಾ ಶಿಬಿರ

ಉಜಿರೆ: ಇಂದಿನ ಕಲುಷಿತ ವಾತಾವರಣ ಮಾನಸಿಕ ಗೊಂದಲಗಳಿಂದ ಮನುಷ್ಯನ ಆರೋಗ್ಯ ಹದಗೆಡುತ್ತಿದೆ. ಸೂಕ್ತ ಚಿಕಿತ್ಸೆಯ ಮೂಲಕ ಆರೋಗ್ಯದ ಬಗೆಗೆ ಕಾಳಜಿ ವಹಿಸಿ ದೈಹಿಕ, ಮಾನಸಿಕವಾಗಿ,ಆರೊಗ್ಯಪೂರ್ಣ ಜೀವನ ನಡೆಸಬೇಕು ಸಂಘಟನೆಗಳು ಸೇವಾ ಮನೋಭಾವದಿಂದ ಉಚಿತ ಶಿಬಿರ ನಡೆಸಿ, ದುರ್ಬಲ ವರ್ಗದವರ ಆರೋಗ್ಯ ಸುಧಾರಣೆಗೆ ಕಾಳಜಿವಹಿಸುತ್ತಿರುವುದು ಶ್ಲಾಘನೀಯ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥನದ ಆಡಳಿತ ಮೊಕ್ತೇಸರ ವಿಜಯ ರಾಘವ ಪಡ್ವೆಟ್ನಾಯರು ನುಡಿದರು.
ಅವರು ಅ.21 ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ, ಉಜಿರೆಯ ಛತ್ರಪತಿ ಶಿವಾಜಿ ಫ್ರೆಂಡ್ಸ್ ಸೇವಾ ಟ್ರಸ್ಟ್ ಮತ್ತು ಉಜಿರೆ ಸಂಗಮ ಯುವಕ ಮಂಡಲ ಇಜ್ಜಲ ಇವುಗಳ ಸಹಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸುರಕ್ಷಾ ಮೆಡಿಕಲ್ಸ್ ಶ್ರೀಧರ್ ಕೆ.ವಿ, ಕಣ್ಣು ದೇವರು ಕೊಟ್ಟ ಅಮೂಲ್ಯ ಸಂಪತ್ತು. ಕಣ್ಣಿನ ರಕ್ಷಣೆ ನಮ್ಮ ಜವಾಬ್ದಾರಿ, ಕಂಪ್ಯೂಟರ್ ಮತ್ತು ಮೊಬೈಲ್ ಅತಿಯಾದ ಬಳಕೆಯಿಂದ ಶೇ.25 ರಷ್ಟು ದೃಷ್ಟಿದೋಷ ಬರುವುದು. ಕನಿಷ್ಟ 6 ತಿಂಗಳಿಗೊಮ್ಮೆ ಕಣ್ಣು ತಪಾಸಣೆ ಅವಶ್ಯವೆಂದರು. ಮುಖ್ಯ ಅತಿಥಿ ವಿ.ಹಿಂ.ಪರಿಷತ್ ಜಿಲ್ಲಾ ಉಪಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ನೇತ್ರದಾನ ಶ್ರೇಷ್ಠ ದಾನ ಸತ್ತ ನಂತರ ಅಂಗದಾನದಿಂದ ಇನ್ನೊಂದು ಜೀವಕ್ಕೆ ನೆರವಾಗಬೇಕು ಎಂದರು. ಶಂಕರ ಅಸ್ಪತ್ರೆಯ ರವಿಕುಮಾರ್ ನೇತ್ರ ತಪಾಸಣೆ ಹಾಗೂ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು. ಶಂಕರ ಆಸ್ಪತ್ರೆಯ ಡಾ| ಸುರೇಶ್, ಛತ್ರಪತಿ ಶಿವಾಜಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಸಂತೋಷ ನಾಕ್ ಅತ್ತಾಜೆ, ಸಂಗಮ ಯುವಕ ಮಂಡಲದ ನಳಿನಿ ಇಚ್ಚಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಜೀವ ಶೆಟ್ಟಿ ಕುಂಟಿನಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಶಿಬಿರದಲ್ಲಿ ಒಟ್ಟು 150 ಜನರ ತಪಾಸಣೆ ನಡೆಸಿ, 26 ಜನರನ್ನು ಶಿವಮೊಗ್ಗ ಶಂಕರ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.