ಅ.22 ರಂದು ಬೀಡಿ ಕಾರ್ಮಿಕರ ಧರಣಿ

ಬೆಳ್ತಂಗಡಿ:  ಬೀಡಿ ಮಾಲಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಕಾರ್ಮಿಕರಿಗೆ ನೀಡಲು ಬಾಕಿ ಇರುವ ತುಟ್ಟಿಭತ್ಯೆ ಹಾಗೂ ಕನಿಷ್ಟ ಕೂಲಿ ಜಾರಿ ಮಾಡಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ  ಅ.22 ರಂದು ರಂದು ಪುತ್ತೂರು ಮಿನಿಧಾನ ಸೌದದ ಎದುರು ಬೆಳ್ತಂಗಡಿ, ಸುಳ್ಯ, ಪುತ್ತೂರು ತಾಲೂಕುಗಳ ಬೀಡಿ ಕಾರ್ಮಿ ಕರು ಧರಣಿ ನಡೆಸುವುದಾಗಿ  ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘದ ಅದ್ಯಕ್ಷ  ನ್ಯಾಯವಾದಿ ಬಿ.ಎಂ.ಭಟ್  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನಿಷ್ಟ ವೇತನ ಕಾಯ್ದೆ ನಿಯಮ 5(1)ಎ ಅಡಿ ರಚಿಸಲಾದ ಸಮಿತಿಯ ಸರ್ವಾನುಮತದ ತೀರ್ಮಾನದಂತೆ ಕರ್ನಾಟಕ ಸರಕಾರವು 14/03/2018ರಂದು ಬೀಡಿಕಾರ್ಮಿಕರಿಗೆ 01/04/2018 ರಿಂದ ಜಾರಿಯಾಗುವಂತೆ ಕನಿಷ್ಟ ಕೂಲಿ ಸಾವಿರ ಬೀಡಿಗೆ ರೂ.210 ಎಂದು ಅಧಿಸೂಚನೆ ನೀಡಿದೆ. ಆದರೆ ಮಾಲಕರು 5(1)ಎ ಸಮಿತಿಯ ತೀರ್ಮಾನವನ್ನೂ, ಸರಕಾರದ ಆದೇಶವನ್ನೂ ಉಲ್ಲಂಘಿಸಿ ಕಾನೂನು ಬಾಹಿರವಾಗಿ ಸಾವಿರ ಬೀಡಿಗೆ ಕೇವಲ 180.54 ರಂತೆ ವೇತನ ನೀಡುತ್ತಾ ಕಾರ್ಮಿಕರಿಗೆ ಮೋಸ ಮಾಡುತ್ತಾ ಬೀಡಿ ಕಟ್ಟಿಸುತ್ತಿದ್ದಾರೆ ಹಾಗೂ ಬೀಡಿಕಾರ್ಮಿಕರಿಗೆ ಡಿ.ಎ. 01/04/2015 ರಲ್ಲಿ ಏರಿಕೆಯಾಗಿ ದಿನಕ್ಕೆ ರೂ.12.75 ಜಾರಿಯಾಗಿದ್ದನ್ನು ಕಳೆದ 3 ವರ್ಷಗಳಿಂದ ನೀಡದೆ ಬೀಡಿ ಮಾಲಕರು ಕಾರ್ಮಿಕರಿಗೆ ವಂಚಿಸುತ್ತಾ ಬರುತ್ತಿದ್ದಾರೆ. ಈ ರೀತಿ ಬಾಕಿ ಮಾಡಿದ್ದು ಪ್ರತಿ ಕಾರ್ಮಿಕರಿಗೆ ತಲಾ ರೂ 12000/-ನಷ್ಟು ನೀಡಲು ಬಾಕಿ ಅಗುತ್ತದೆ. ಮಾತ್ರವಲ್ಲ ಬೀಡಿ ಮಾಲಕರು ಬೀಡಿ ಕಾರ್ಮಿಕರ ಕಾನೂನು ಬದ್ದ ಹಕ್ಕಾದ ಗ್ರಾಚ್ಯುವಿಟಿ ಸವಲತ್ತನ್ನ ನೀಡದೆ ಲಕ್ಷಾಂತರ ಕಾರ್ಮಿಕರಿಗೆ ವಂಚನೆ ಮಾಡುತ್ತಿದ್ದಾರೆ.  ಬೀಡಿ ಮಾಲಕರ ಮೇಲೆ ಈ ಎಲ್ಲಾ ಅನ್ಯಾಯಗಳ ವಿರುದ್ದ ಕಾರ್ಮಿಕ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಧರಣಿ ನಡೆಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘದ  ಪ್ರಧಾನ ಕಾರ್ಯದರ್ಶಿ ಶ್ರೀಮತಿ ದೇವಕಿ, ಮುಖಂಡರುಗಳಾದ ಜಯರಾಮ ಮಯ್ಯ, ಈಶ್ವರಿ, ಲೋಕೇಶ್ ಕುದ್ಯಾಡಿ, ನೆಬಿಸಾ, ಪುಷ್ಪಾ, ಜಯಶ್ರೀ, ಇಂದಿರಾ, ಸುಜಾತ ಹೆಗ್ಡೆ, ರಾಮಚಂದ್ರ, ಶೇಖರ ವೇಣೂರು, ಜೋಶೀಲ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.