ನೆರಿಯ: ಗ್ಯಾಸ್ ಪೈಪ್‌ಲೈನ್ ಮೇಲಿನ ಮಣ್ಣು ಕೊರೆದುಹೋಗಿ ಅಪಾಯದ ಆತಂಕ

ನೆರಿಯ: ನೆರಿಯ ಗ್ರಾಮದ ಮೂಲಕ ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಶನ್‌ನ ಲಿಕ್ವಿಡ್ ಪೆಟ್ರೋಲ್ ಗ್ಯಾಸ್ ಪೈಪ್‌ಲೈನ್ ಸ್ಟೇಷನ್ ಮೂಲಕ ಪೈಪ್‌ಲೈನ್‌ನಲ್ಲಿ ಹಾದುಹೋಗುವ ಗ್ಯಾಸ್ ಪೈಪ್‌ಲೈನ್ ಪ್ರದೇಶದ ಕುದನೆ ಎಂಬ ಭಾಗದಲ್ಲಿ ಪ್ರಾಕೃತಿಕ ವಿಕೋಪದಿಂದ ಮಣ್ಣು ಕೊರೆದು ಹೋಗಿದ್ದು ಅಪಾಯ ಸಂಭವಿಸುವ ಸಾಧ್ಯತೆ ಬಗ್ಗೆ ಜನರಲ್ಲಿ ಆತಂಕ ಮೂಡಿದೆ.
ಕಳೆದ ಮಳೆಗಾಲದಲ್ಲೇ ಪ್ರಾಕೃತಿಕ ವಿಕೋಪ ಸಂಭವಿಸಿ ಮಣ್ಣುಕುಸಿತ ಮತ್ತು ಬಂಡೆಕಲ್ಲುಗಳು ಉರುಳಿದ ಬಗ್ಗೆ ಸ್ಥಳೀಯ ಪಂಚಾಯತ್ ಮೂಲಕ ಕಂಪೆನಿಗೆ ಲಿಖಿತ ಮಾಹಿತಿ ನೀಡಿದರೂ ಇದುವರೆಗೆ ಕಂಪೆನಿ ಕಡೆಯಿಂದ ಯಾವುದೇ ಪ್ರತಿಕ್ರೀಯೆ ದೊರೆತಿಲ್ಲ ಎನ್ನಲಾಗಿದೆ.
ನಿಷೇಧಿತ ಪ್ರದೇಶವೆಂದು ಘೋಷಿಸಲು ಡಿಸಿ ಗೆ ಮನವಿ: ಈ ನಡುವೆ ಕಂಪೆನಿ ನಿರ್ಮಿಸಿದ ಪೈಪ್‌ಲೈನ್ ಸ್ಟೇಷನ್ ಭಾಗವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಬೇಕಾಗಿ ಡಿಸಿ ಗೆ ಮನವಿ ಸಲ್ಲಿಸಿರುವ ಮಾಹಿತಿ ಲಭ್ಯವಾಗಿದೆ. ಆಶ್ಚರ್ಯವೆಂದರೆ ಕಂಪೆನಿ ಕಡೆಯಿಂದ ಇಲ್ಲಿ ನಿರ್ಮಿಸಲಾಗಿರುವ ಯಾವುದೇ ಕಟ್ಟಡಗಳಿಗೆ ಪಂಚಾಯತ್‌ನಿಂದ ಪರವಾನಿಗೆ ಪಡೆದುಕೊಂಡಿಲ್ಲ ಎಂಬುದು. ಇದೀಗ ಕಂಪೆನಿ ಉದ್ಧೇಶಿತ ಪ್ರದೇಶ ನಿಷೇಧಿತ ಪ್ರದೇಶ ಎಂದು ಡಿಸಿ ಯಿಂದ ಘೋಷಿಲ್ಪಟ್ಟರೆ ಇದೇ ದಾರಿ ಮೂಲಕ ಹಾದುಹೋಗಲಿರುವ ಕೋಲೋಡಿ ಮಲೆಕುಡಿಯ ಕಾಲನಿಯ ಪ್ರದೇಶದ ಜನತೆ ಮತ್ತು ಸ್ಥಳೀಯ ಶಾಲಾ ಮಕ್ಕಳಿಗೂ ಭಾರೀ ತೊಂದರೆ ಎದುರಾಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.