ಇಂಜಿನಿಯರ್‍ಸ್ ಏಷ್ಯಾ ಸಮ್ಮೇಳನಕ್ಕೆ ಆಯ್ಕೆ

ಬೆಳ್ತಂಗಡಿ: ಉಜಿರೆ ಎಸ್.ಡಿ.ಎಂ ಇಂಜಿನಿ ಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಹಳೆ ವಿದ್ಯಾರ್ಥಿನಿ ಐಶ್ವರ್ಯ ಕೆ. ಇವರು ಜಪಾನ್‌ನ ರಿತ್ಯುಮೇಕನ್ ವಿ.ವಿ.ಯು ಅ.18 ರಿಂದ ಅ.23 ರವರೆಗೆ ಆಯೋಜಿಸಿರುವ ಗ್ಲೋಬಲ್ ಫಾರ್ ಲೀಡಿಂಗ್ ಎಂಜಿನಿಯರ್‍ಸ್ ಇನ್ ಏಷ್ಯಾ ಸಮ್ಮೇಳನಕ್ಕೆ ಆಯ್ಕೆಯಾಗಿರುತ್ತಾರೆ.
ವಿಶ್ವದ 6 ದೇಶಗಳ 6 ತಾಂತ್ರಿಕ ಕಾಲೇಜುಗಳಿಂದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರನ್ನು ಆಹ್ವಾನಿಸಿದ್ದು, ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ರಿಸರ್ಚ್ ವಿಭಾಗದ ಡೀನಾ, ಡಾ| ಸುದೇಶ್ ಬೇಕಲ್ ರವರ ನೇತೃತ್ವದಲ್ಲಿ 5 ಮಂದಿ ವಿದ್ಯಾರ್ಥಿಗಳನ್ನೂಳಗೊಂಡ ತಂಡವು ಭಾರತ ದೇಶವನ್ನು ಪ್ರತಿನಿಧಿಸಲಿದೆ. ಇದರಲ್ಲಿ ಐಶ್ವರ್ಯ.ಕೆ ಇವರೂ ಒಬ್ಬರಾಗಿದ್ದಾರೆ. ಈ 5 ವಿದ್ಯಾರ್ಥಿಗಳ ತಂಡ ಅ. 17 ರಂದು ಜಪಾನ್‌ಗೆ ತೆರಳಿದ್ದಾರೆ.
ಇವರು ಬೆಳ್ತಂಗಡಿ ಮನೋಹರ ತೋಡ್ತಿಲ್ಲಾಯ ಹಾಗೂ ಮೀನಾಕ್ಷಿ ತೋಡ್ತಿಲ್ಲಾಯ ದಂಪತಿ ಪುತ್ರಿ. ಉಜಿರೆಯ ವಸ್ತ್ರಂ ಮನ್ಸ್‌ವೇರ್ ಮಳಿಗೆ ಮಾಲಕ ಅಭಿಷೇಕ್ ಭಟ್ ರವರ ಧರ್ಮಪತ್ನಿ. ಪ್ರಸ್ತುತ ಇವರು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಂ.ಟೆಕ್ ವ್ಯಾಸಾಂಗ ಮಾಡುತ್ತಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.