ಸರಕಾರಿ ಆಸ್ಪತ್ರೆಗಳಲ್ಲಿ ಇನ್ನು 58 ರೋಗಪತ್ತೆ ಪರೀಕ್ಷೆಗಳು ಉಚಿತ

ದುಬಾರಿ ಶುಲ್ಕದ ಎಂ.ಆರ್.ಐ, ಸಿಟಿ ಸ್ಕ್ಯಾನ್, ಥೈರಾಯ್ಡ್ ಪರೀಕ್ಷೆ ಸೇರಿದಂತೆ ಒಟ್ಟು 58 ಬಗೆಯ ರೋಗಪತ್ತೆ ಪರೀಕ್ಷೆಗಳು ಇನ್ನುಮುಂದೆ ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನಡೆಸಿಕೊಳ್ಳಬಹುದಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರಿನಲ್ಲಿ ತಿಳಿಸಿದೆ.
ಹೃದ್ರೋಗ ಪರೀಕ್ಷೆಗಳಾದ ಇಸಿಜಿ ಹಾಗೂ ಎಕೋ, ಯಕೃತ್, ಕಿಡ್ನಿ ತಪಾಸಣಾ ಪರೀಕ್ಷೆ, ಕ್ಷ-ಕಿರಣ(ಎಕ್ಸ್‌ರೇ), ರಕ್ತ ಪುಂಪಿನ ಪರೀಕ್ಷೆ, ಎಲ್ಲಾ ಬಗೆಯ ರಕ್ತದ ಪರೀಕ್ಷೆಗಳು, ಮೂತ್ರ ಪರೀಕ್ಷೆ, ಮಲೇರಿಯಾ, ಡೆಂಗ್ಯೂ ಪರೀಕ್ಷೆಗಳು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಕೊಬ್ಬಿನಾಂಶ ಪರೀಕ್ಷೆಗಳು ಹೀಗೆ ಒಟ್ಟು 58 ಬಗೆಯ ಪರೀಕ್ಷೆಗಳು ಈ ಯೋಜನೆಯಡಿ ಉಚಿತವಾಗಿ ಲಭಿಸಲಿದೆ.
ಹಿಂದೆ ಬಿಪಿಎಲ್ ಕುಟುಂಬ ಸದಸ್ಯರಿಗೆ ಒಂದಿಷ್ಟು ಆರೋಗ್ಯ ಸೇವೆಗಳು ಉಚಿತವಾಗಿದ್ದವು. ಇನ್ನು ಕೆಲವು ಪರೀಕ್ಷೆಗಳಿಗೆ 50 ಶೇ. ಹಣ ಪಾವತಿಸಬೇಕಾಗಿತ್ತು. ಪ್ರಸ್ತುತ ಅದರ ವ್ಯಾಪ್ತಿಯನ್ನು 2018-19 ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯ ಉಚಿತ ರೋಗಪತ್ತೆ ಪರೀಕ್ಷೆಗಳು ಎಂಬ ಕಾರ್ಯಕ್ರಮದಡಿ ಜೋಡಿಸಿ ಎಲ್ಲರಿಗೂ ದೊರೆಯುವಂತೆ ವಿಸ್ತರಣೆ ಮಾಡಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
 ತಾಲೂಕು ಕೇಂದ್ರಗಳಲ್ಲಿ ಇನ್ನೂ ಅಲಭ್ಯ:
ಈ ಅತ್ಯಾಧುನಿಕ ಸೌಲಭ್ಯಗಳ ಪೈಕಿ ಎಂಆರ್‌ಐ, ಸಿಟಿಸ್ಕ್ಯಾನ್‌ನಂತಹಾ ಉನ್ನತ ಪರೀಕ್ಷೆ ಘಟಕಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಅಲಭ್ಯವಾಗಿದ್ದು, ಜಿಲ್ಲಾ ಕೇಂದ್ರಗಳ ಆಸ್ಪತ್ರೆಯಲ್ಲಿ ಮಾತ್ರ ಸೌಲಭ್ಯ ಪಡೆಯಬಹುದಾಗಿದೆ. ಇದರಿಂದ ಹಳ್ಳಿಯ ಜನತೆಗೆ ಪ್ರಯೋಜನ ಶೂನ್ಯವಾಗಿದ್ದು ಆದಷ್ಟು ಶೀಘ್ರದಲ್ಲಿ ಈ ಸೌಲಭ್ಯಗಳು ಹಳ್ಳಿಗೂ ವಿಸ್ತರಣೆಯಾದರೆ ಜನತೆಗೆ ಇನ್ನಷ್ಟು ಸೇವಾ ಸೌಲಭ್ಯ ದೊರೆತು ಸರಕಾರಿ ಆಸ್ಪತ್ರೆ ವ್ಯವಸ್ಥೆ ಬಗ್ಗೆ ಜನರಲ್ಲಿ ಇನ್ನಷ್ಟು ಆತ್ಮವಿಶ್ವಾಸ ಮೂಡಲು ಕಾರಣವಾಗಬಹುದಾಗಿದೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.