ಚರ್ಚ್‌ರೊಡ್ ಬಳಿ ಮನೆಗೆ ನುಗ್ಗಿ ಕಳ್ಳತನ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ನಗರದ ಚರ್ಚ್ ರೋಡ್ ಬಳಿ ಇರುವ ಮನೆಯೊಂದರಲ್ಲಿ ಯಾರೂ ಇಲ್ಲದ ಸಂದರ್ಭ ಮನೆಯ ಕಿಟಕಿಯ ಮೂಲಕ ಕಳ್ಳರು ಒಳನುಗ್ಗಿದ್ದು, ಸುಮಾರು 14.ಗ್ರಾಂ ಚಿನ್ನಾಭರಣವನ್ನು ಕದ್ದೊಯ್ದ ಘಟನೆ ಅ.14 ರಂದು ನಡೆದಿದೆ.
ಚರ್ಚ್ ರೋಡ್ ನಿವಾಸಿ ರೊನಾಲ್ಡ್ ಪಿಂಟೊ ರವರ ಪತ್ನಿ ಅಮಣಿ ರವರು ಅ.10 ರಂದು ಮನೆಗೆ ಬೀಗ ಹಾಕಿ ಮಗಳ ಮನೆಗೆ ತೆರಳಿದ್ದರು. ತಮ್ಮ ಮನೆಗೆ ಕಳ್ಳರು ನುಗ್ಗಿದ ವಿಚಾರವು ನೆರೆಮನೆಯವರಿಂದ ಅವರಿಗೆ ತಿಳಿದಿದ್ದು, ಕೂಡಲೇ ಮಗಳ ಮನೆಯಿಂದ ಹೊರಟು ಮನೆಗೆ ಬಂದು ನೋಡಿದಾಗ, ಕಿಟಕಿ ಮೂಲಕ ಕಳ್ಳರು ಒಳ ನುಗ್ಗಿ ಕಳ್ಳತನ ನಡೆದಿರುವುದಾಗಿ ತಿಳಿದುಬಂದಿದೆ.
ಒಳ ನುಗ್ಗಿದ ಕಳ್ಳರು ಕಪಾಟಿನ ಬೀಗ ಒಡೆದು, ಅದರಲ್ಲಿದ್ದ 14.ಗ್ರಾಂ ಚಿನ್ನಾಭರಣವನ್ನು ಕದ್ದೊಯ್ದಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.