ಬೆಳ್ತಂಗಡಿಯಲ್ಲಿ ನೂತನ ನಿರ್ಮಾಣ ಸಂಸ್ಥೆ “ಸೋಜಾ ಬಿಲ್ಡರ್ಸ್”, “ಆರ್.ಪಿ ಕನ್ಟ್ರಕ್ಷನ್ಸ್” ಶುಭಾರಂಭ

ಬೆಳ್ತಂಗಡಿ: ಕಳೆದ 23 ವರ್ಷಗಳಿಂದ ಬೆಳ್ತಂಗಡಿಯಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಪೀಟೋಪಕರಣಗಳ ಮಾರಾಟ ಮತ್ತು ಸೇವಾ ವ್ಯವಹಾರ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಸೇವೆಯೊಂದಿಗೆ ಮನೆಮಾತಾಗಿರುವ ಸೋಜಾ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಸಂಸ್ಥೆಯ ಹೊಸ ಹೆಜ್ಜೆ, ಬೆಳ್ತಂಗಡಿ ನಗರದಲ್ಲಿ ಇದೇ ಮೊದಲ ಬಾರಿಗೆ ಸೋಜಾ ಬಿಲ್ಡರ್‍ಸ್ ಮತ್ತು ಆರ್.ಪಿ ಕನ್ಟ್ರಕ್ಷನ್ಸ್ ನಿರ್ಮಾಣ ಸಂಸ್ಥೆ ಅ. 14 ರಂದು ಉದ್ಘಾಟನೆಗೊಂಡಿತು.
ನೂತನ ಕಚೇರಿಯ ಫಲಕವನ್ನು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಅನಾವರಣಗೊಳಿಸಿದರು. ದೀಪಪ್ರಜ್ವಲನದ ಮೂಲಕ ನೂತನ ಕಚೇರಿಯನ್ನು ಉಜಿರೆ ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಅಶೋಕ್ ಉದ್ಘಾಟಿಸಿದರು. ಬೆಳ್ತಂಗಡಿ ಡಿಕೆಆರ್‌ಡಿಎಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ರೆ. ಫಾ ಜೋಸ್ ಅಯಾಂಕುಡಿ ಶುಭಾಶೀರ್ವಚನಗೈದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಪ್ರಸಾದ್ ಅಜಿಲ, ಸೋಜಾ ಮೆಟಲ್ಸ್ ಪುತ್ತೂರು ಇದರ ಮಾಲಕ ಜೋನ್ ಕುಟಿನ್ಹಾ, ಚಾರ್ಮಾಡಿ ಗ್ರಾ.ಪಂ ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ, ಹಿರಿಯ ವಕೀಲರ ಸಂಘದ ಅಧ್ಯಕ್ಷ ಶಶಿಕಿರಣ್ ಜೈನ್, ಎಸ್‌ಡಿಪಿಐ ತಾ. ಅಧ್ಯಕ್ಷ ನವಾಝ್ ಶರೀಫ್ ಕಟ್ಟೆ ಶುಭಾಶಂಸನೆಗೈದರು.
ವೇದಿಕೆಯಲ್ಲಿ ವಿಕಾಸ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎಲೋಶಿಯಸ್ ಡಿಸೋಜಾ, ಕೆಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಹೆನ್ರಿ ಲೋಬೋ, ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಅಕ್ಬರ್ ಬೆಳ್ತಂಗಡಿ ಉಪಸ್ಥಿತರಿದ್ದರು. ಬಳಿಕ ಮಾಜಿ ಶಾಸಕ ವಸಂತ ಬಂಗೇರ ಭೇಟಿನೀಡಿ ನೂತನ ಸಂಸ್ಥೆಗೆ ಶುಭಹಾರೈಸಿದರು. ಸೋಜಾ ಇಲೆಕ್ಟ್ರಾನಿಕ್ಸ್ ವ್ಯವಸ್ಥಾಪಕ ಲೇನ್ಸಿ ಡಿಸೋಜಾ, ಮಾಲಕರ ಪುತ್ರ ಅವಿನ್ ಆಕಾಶ್ ಫ್ರಾಂಕ್, ಸೋಜಾ ಇಲೆಕ್ಟ್ರಾನಿಕ್ಸ್, ಸೋಜಾ ಎಜ್ಯು ಅಕಾಡಮಿ ಸಂಸ್ಥೆಯ ಎಲ್ಲಾ ಸಿಬಂದಿಗಳು ಸಹಕಾರ ನೀಡಿದರು.
ಫ್ರಾಂಕೋ ಬಿಲ್ಡರ್‍ಸ್ ಮಾಲಕ ಅಲ್ಫೋನ್ಸ್ ಫ್ರಾಂಕೋ ಸ್ವಾಗತದೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಪಿ ಕನ್ಟ್ರಕ್ಷನ್ಸ್ ನ ಇಂಜಿನಿಯರ್ ರಾಹುಲ್ ಪಿ ಅತಿಥಿಗಳನ್ನು ಬರಮಾಡಿಕೊಂಡರು. ಲ| ಅಶ್ರಫ್ ಆಲಿಕುಂಞಿ ಕಾರ್ಯಕ್ರಮ ನಿರೂಪಿಸಿದರು. ಅರ್ವಿನ್ ಡಿಸೋಜಾ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.