ಉಜಿರೆ : ಶುದ್ಧ ಕುಡಿಯುವ ನೀರಿನ ಯಂತ್ರ ಕೊಡುಗೆ

ಉಜಿರೆ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವದ ಸಂದರ್ಭ ಭಾರತೀಯ ಜೈನ್ ಮಿಲನ್ ಹಮ್ಮಿಕೊಂಡಿರುವ ಕಾರ್ಯಕ್ರಮದಡಿ ಬೆಳ್ತಂಗಡಿ ಶಾಖಾ ವತಿಯಿಂದ ಕುಡಿಯುವ ನೀರಿನ ಯಂತ್ರವನ್ನು ಬೈಪಾಡಿ ಬಸದಿ ಶ್ರೀ ಶಾಂತಿನಾಥ ಸ್ವಾಮಿ ಜಿನ ಮಂದಿರಕ್ಕೆ ನೀಡಲಾಯಿತು. ಇದರ ಪ್ರಾಯೋಜಕತ್ವವನ್ನು ಸ್ವರ್ಗೀಯ ಶ್ರೀಮತಿ ಶಾಂತ ಇವರ ಸ್ಮರಣಾರ್ಥ ಉದಿತ್ ಕುಮಾರ್ ಶಾಂತೀಶ ಬೆಳಾಲು ಇವರ ಪರವಾಗಿ ಪುತ್ರ ಉಜಿರೆಯ ಜೈನ್ ತರಕಾರಿ ಮಾಲಕ ಧರಣೇಂದ್ರ ಜೈನ್ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವೀರ್ ಪಾರ್ಶ್ವನಾಥ ಜೈನ್ ವಹಿಸಿದರು. ಮಿಲನ್ ಕಾರ್ಯದರ್ಶಿ ವೀರ್ ಮುನಿರಾಜ್ ಅಜ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಿಲನ್ ನಿರ್ದೇಶಕ ವೀರ್ ಬಿ.ಸೋಮಶೇಖರ ಶೆಟ್ಟಿಯವರು ಮಿಲನ್ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಹಾಗೂ ಈ ಕೊಡುಗೆಯ ಉದ್ದೇಶವನ್ನು ತಿಳಿಸಿ ದಾನಿಗಳನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ದಾನಿ ಧರಣೇಂದ್ರ ಜೈನ್‌ರವರನ್ನು ಬಸದಿಯ ವತಿಯಿಂದ ಗೌರವಿಸಲಾಯಿತು. ಕೊಡುಗೆಯನ್ನು ಬಸದಿಯ ಪರವಾಗಿ ಸಮಿತಿಯ ಅಧ್ಯಕ್ಷ ಅಜಿತ್ ಕುಮಾರ್ ಉಳಿಯ, ಕಾರ್ಯದರ್ಶಿ ಜಗದೀಶ ಹಾಗೂ ಸದಸ್ಯರು ಸ್ವೀಕರಿಸಿದರು. ರವಿಚಂದ್ರ ಬೆಳಾಲು ನಿರೂಪಿಸಿ, ಸ್ವಾಗತಿಸಿ, ಜಯಕೀರ್ತಿ ಜೈನ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.