ಅನಾರು ಕಾಲನಿಗೆ ದ.ಕ ಜಿಲ್ಲಾಧಿಕಾರಿ ಭೇಟಿ: ಅನ್ನಾರು, ನಡ್ತಿಲು, ಚಿಬಿದ್ರೆಗೆ ರಸ್ತೆ ನಿರ್ಮಾಣಕ್ಕೆ ಬೇಡಿಕೆ

ಕಕ್ಕಿಂಜೆ: ಚಾರ್ಮಾಡಿ ಗ್ರಾಮ ಪಂಚಾಯತು ವ್ಯಾಪ್ತಿಯ ಅನ್ನಾರು ಗಿರಿಜನ ಕಾಲನಿಗೆ ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಅ.10 ರಂದು ಭೇಟಿ ನೀಡಿ ಕಾಲನಿಯ ನಿವಾಸಿಗಳ ಅಹವಾಲುಗಳನ್ನು ಸ್ವೀಕರಿಸಿದರು.
ಅನ್ನಾರು ಕಾಲನಿಯಲ್ಲಿ ಗಿರಿಜನರು ಕಳೆದ ನೂರು ವರ್ಷಗಳಿಂದ ವಾಸಿಸುತ್ತಿದ್ದಾರೆ. ಆದರೂ ಇದುವರೆಗೆ ಯಾವ ಡಿ.ಸಿಯವರು ಈ ಕಾಲನಿಗೆ ಭೇಟಿ ನೀಡಿರಲ್ಲಿಲ್ಲ. ಸಸಿಕಾಂತ್ ಸೆಂಥಿಲ್ ಈ ಕಾಲನಿಗೆ ಭೇಟಿ ನೀಡಿದ ಪ್ರಥಮ ಡಿ.ಸಿಯಾಗಿದ್ದಾರೆ.
ಕಾಲನಿಗೆ ಭೇಟಿ ನೀಡಿದ ಅವರಿಗೆ ಕಾಲನಿಯ ನಿವಾಸಿಗಳು ಮತ್ತು ಗ್ರಾಮಸ್ಥರು ಚಿಬಿದ್ರೆ ಗ್ರಾಮದ ಕರೆ ಅಭಿವೃದ್ಧಿ, ಅನ್ನಾರು ರಸ್ತೆಗೆ ತಡೆಗೋಡೆ ನಿರ್ಮಾಣ ಮತ್ತು ರಸ್ತೆ ಕಾಂಕ್ರೀಟೀಕರಣ, ಅನ್ನಾರು ಗಿರಿಜನ ಕಾಲನಿ ರಸ್ತೆ ವಿಸ್ತರಿಸಿ ಚಿಬಿದ್ರೆ ಗ್ರಾಮದ ನಡತಿಲು ಎಂಬಲ್ಲಿಯ ಗಿರಿಜನ ಕಾಲನಿ ರಸ್ತೆ ವಿಸ್ತರಿಸಿ ಚಿಬಿದ್ರೆ ಗ್ರಾಮದ ನಳಿಲು, ಹೊಯಿಗೆ ಗದ್ದೆ, ಕೋಡಿಜಾಲು, ನಡ್ತಿತಿಲು ಎಂಬಲ್ಲಿಯ ಗಿರಿಜಯ ಕಾಲನಿಗೆ ಮೂಲಕ ಚಿಬಿದ್ರೆ ಮುಖ್ಯ ರಸ್ತೆಗೆ ಜೋಡಿಸುವುದು, ಅಂಗನವಾಡಿ, ಟ್ರಾನ್ಸ್‌ಫಾರ್ಮರ್ ಪೆಟ್ಟಿಗೆ, ಸಮುದಾಯ ಭವನ, ಕತ್ತರಿಗುಡ್ಡೆಗೆ ನೀರಿನ ಟ್ಯಾಂಕಿಯ ಮನವಿಯನ್ನು ನೀಡಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಇದರ ಬಗ್ಗೆ ಪರಿಶೀಲನೆ ನಡೆಸಿ, ಸ್ಪಂದಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಗ್ರಾ.ಪಂ ಮಾಜಿ ಸದಸ್ಯ ಉಮೇಶ್ ಗೌಡ, ಯಶೋಧರ ವಲಸರಿ, ಬೆಳ್ತಂಗಡಿ ತಾಲೂಕು ಮಲೆಕುಡಿಯ ಸಂಘದ ಕಾರ್ಯದರ್ಶಿ ಹರೀಶ್ ಎಳನೀರು, ಚಾರ್ಮಾಡಿ ಗ್ರಾಮದ ವಲಯ ಸಮಿತಿ ಮಲೆಕುಡಿಯ ಸಂಘದ ಅಧ್ಯಕ್ಷ ಜಯಾನಂದ ನಡ್ತಿಲು, ಕಾರ್ಯದರ್ಶಿ ಶ್ರೀನಿವಾಸ ಅನಾರು, ಸಂಘದ ಸರ್ವ ಸದಸ್ಯರು, ಊರಿನ ನಾಗರಿಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.