ಮಾಚಾರು: ನೆಹರು ಯುವ ಕೇಂದ್ರದಿಂದ ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

ನೆಹರು ಯುವ ಕೇಂದ್ರ ಮಂಗಳೂರು ಮತ್ತು ಪ್ರಗತಿ ಯುವಕ ಮಂಡಲದ ವತಿಯಿಂದ ಬದನಾಜೆ ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿ ವಠಾರದಲ್ಲಿ 3 ತಿಂಗಳ ಉಚಿತ ಟೈಲರಿಂಗ್ ತರಬೇತಿ ಶಿಬಿರ ಉದ್ಘಾಟನೆ ನಡೆಯಿತು.
ತಾ.ಪಂ. ಸದಸ್ಯ ಎಂ. ಶಶಿಧರ ಕಲ್ಮಂಜ ಉದ್ಘಾಟನೆ ನೆರವೇರಿಸಿ, ಗ್ರಾಮೀಣ ಪ್ರದೇಶದಲ್ಲಿ ಇಂತಹಾ ತರಬೇತಿಗಳನ್ನು ಹಮ್ಮಿಕೊಂಡು ಆಸಕ್ತರನ್ನು ಸ್ವಾವಲಂಭಿಗಳಾಗಿಸುವ ಉದ್ಧೇಶ ಉತ್ತಮವಾಗಿದೆ. ಮಹಿಳೆಯರು ಇಂತಹಾ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಂಡು ಆರ್ಥಿಕವಾಗಿ ಸಧೃಢರಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಣ ಸಹಾಯಕ ಬಾಜಿಮಾರು ಬಾಬು ಗೌಡ ಮಾತನಾಡಿ, ಇಂದು ಕಾಲ ಬದಲಾಗಿದ್ದು ಮಹಿಳೆ ಪುರುಷ ಎಂಬ ಭೇದವಿಲ್ಲದೆ ಎಲ್ಲರೂ ಉದ್ಯೋಗಿಗಳಾಗಬೇಕಾದ ಅನಿವಾರ್ಯತೆ ಬಂದಿದೆ. ಅಂತವರಿಗೆ ಈ ತರಬೇತಿ ಸ್ವಾವಲಂಬನೆ ನೀಡುತ್ತದೆ ಎಂದರು.
ನೆಹರು ಯುವ ಕೇಂದ್ರದ ಪ್ರತಿನಿಧಿ ಸಾಂತಪ್ಪ ಕಲ್ಮಂಜ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಜಿರೆ ಗ್ರಾ.ಪಂ. ಸದಸ್ಯೆ ನೀಲಮ್ಮ, ಮಾಜಿ ಸದಸ್ಯ ರಾಮಯ್ಯ ಗೌಡ, ಯುವತಿ ಮಂಡಲದ ಅಧ್ಯಕ್ಷೆ ಗೀತಾ ಉಪಾಧ್ಯಾಯ, ಯುವಕ ಮಂಡಲದ ಅಧ್ಯಕ್ಷ ಸುಂದರ ಬಂಗೇರ, ಸಂಪನ್ಮೂಲ ವ್ಯಕ್ತಿ ಉಷಾ ವೇದಿಕೆಯಲ್ಲಿದ್ದರು.
ಸೌಮ್ಯಾ ರಾವ್ ಸ್ವಾಗತಿಸಿ, ಸ್ವಪ್ನಾ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.