ಪುಂಜಾಲಕಟ್ಟೆ: ಸಂಶೋಧನೆಯಲ್ಲಿ ಸಂಖ್ಯಾಶಾಸ್ತ್ರ ಕಾರ್ಯಾಗಾರ

ಪುಂಜಾಲಕಟ್ಟೆ: ಸ.ಪ್ರ.ದ.ಕಾಲೇಜು ಪುಂಜಾಲಕಟ್ಟೆ ಇಲ್ಲಿ ಸಂಶೋಧನೆ ಹಾಗೂ ಸಂಶೋಧನೆಯಲ್ಲಿ ಸಂಖ್ಯಾಶಾಸ್ತ್ರದ ಬಗೆಗಿನ ಕಾರ್ಯಾಗಾರವನ್ನು ಅ.10 ರಂದು ನಡೆಸಲಾಯಿತು.
ಮುಖ್ಯ ಅತಿಥಿಗಳಾಗಿ ಸ.ಪ್ರ.ದ.ಕಾಲೇಜು ಬಂಟ್ವಾಳದ ಪ್ರಾಂಶುಪಾಲ  ಪ್ರೊ.ಗಿರೀಶ್ ಭಟ್ ರವರು ಭಾಗವಹಿಸಿ ಉನ್ನತ ಶಿಕ್ಷಣದಲ್ಲಿ ಸಂಶೊಧನೆಯ
ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು. ಸಂಸ್ಥೆಯ ಪ್ರಾಂಶುಪಾಲ  ಪ್ರೊ.ಗಣಪತಿ ಭಟ್ ಕುಳಮರ್ವ ಅಧ್ಯಕ್ಷತೆ ವಹಿಸಿದ್ದರು. ಅಭ್ಯಾಗತರಾಗಿ ಹಳೆ ವಿದ್ಯಾರ್ಥಿ ಕು|ಸಖಿತಾ, ಸಂಪನ್ಮೂಲ ವ್ಯಕ್ತಿಗಳಾಗಿ ಮಣಿಪಾಲ ವಿಶ್ವವಿದ್ಯಾನಿಲಯದ ಪ್ರೊ|ಆಶ್ಮಾ ಮೊಂತೆರೋ, ಡಾ|ಲೋಕೇಶ ರವರು ಉಪಸ್ಥಿತರಿದ್ದರು. ಈ ಕಾರ್ಯಾಗಾರದಲ್ಲಿ ವಿವಿಧ ಕಾಲೇಜುಗಳಿಂದ ಸುಮಾರು 65 ಪ್ರಾಧ್ಯಾಪಕರು ಭಾಗವಹಿಸಿದ್ದರು.

ಪ್ರೊ|ಪ್ರೀತಿ ಕೆ. ರಾವ್ ಸ್ವಾಗತಿಸಿ, ಪ್ರೊ|ಶೇಖರ್ ಕೆ ವಂದಿಸಿ, ಪ್ರೊ|ವಿಶಾಲ್ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.